Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌಡರ ನೇಮಕಕ್ಕೆ ನಮ್ಮ ವಿರೋಧವಿತ್ತು. ಆದರೆ ವೈದ್ಯಕೀಯ ಸಚಿವ ಸುಧಾಕರ್ ಅವರು ಗಂಗಾಧರ ಗೌಡರನ್ನು ಹಠಕ್ಕೆ ಬಿದ್ದು ನೇಮಿಸಿದ್ದಾರೆ. ಇವರ ನೇಮಕಾತಿ ಪಾರದರ್ಶಕ ವಾಗಿಲ್ಲ ಎಂದು ಸಾರ್ವ ಜನಿಕರೂ ಆರೋಪಿಸುತ್ತಿದ್ದಾರೆ. ಸಚಿವರ ಸಹಕಾರ ನಮಗೆ ಇಲ್ಲದಿದ್ದರೂ ಮುಖ್ಯಮಂತ್ರಿ ನಮ್ಮ ಜತೆಗಿದ್ದಾರೆ ಎಂದು ಹೇಳಿದರು.
ಕೆಲವರು ನನ್ನನ್ನು ಕೆಳಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ವಿಮ್ಸ್ ನಿರ್ದೇಶಕ ಡಾ| ಗಂಗಾಧರ ಗೌಡ ದೂರಿದ್ದಾರೆ. ವಿಮ್ಸ್ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ದೇಶಕ ಸ್ಥಾನದಿಂದ ನನ್ನನ್ನು ಕೆಳಗಿಸುವ ಸಲುವಾಗಿ ಏನೇನೋ ಷಡ್ಯಂತ್ರ ಮಾಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ದಿನ ಕೆಲವರು ಫೋನ್‌ಗಳಲ್ಲಿ ಮಾತನಾಡಿರುವ ಆಡಿಯೋಗಳನ್ನು ಸಂಗ್ರಹಿಸುತ್ತಿದ್ದೇನೆ. ನನ್ನ ಹೆಸರನ್ನು ಕೆಡಿಸುವ ಸಲುವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ರೋಗಿಗಳು ಸತ್ತ ಬಳಿಕ ಶವವಿಟ್ಟು ಪ್ರತಿಭಟನೆ ಮಾಡುವ ಯೋಜನೆ ರೂಪಿಸಿದ್ದರು. ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದರು.