Advertisement

ವ್ಯಾಸನತಾಂಡ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ ಶಾಸಕ ಜಿ.ಕರುಣಾಕರ ರೆಡ್ಡಿ

07:08 PM Nov 30, 2021 | Team Udayavani |

ಹರಪನಹಳ್ಳಿ: ಹವಾಮಾನ ವೈಪರೀತ್ಯ ಹಿನ್ನೆಲೆ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ವ್ಯಾಸನತಾಂಡ ಗ್ರಾಮದಲ್ಲಿ ಜನರಿಗೆ ಕಳೆದ ಎರಡ್ಮೂರು ದಿನಗಳಿಂದ ವಿಶಿಷ್ಟ ಜ್ವರ ಕಾಣಿಸಿಕೊಂಡ ಪರಣಾಮ ಜನರು ಆತಂಕಗೊಂಡಿದ್ದರು, ವಿಷಯ ತಿಳಿದ ಶಾಸಕ ಜಿ.ಕರುಣಾಕರ ರೆಡ್ಡಿ ವೈದ್ಯರೊಂದಿಗೆ ಮಂಗಳವಾರ ದಿಡೀರ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಗ್ರಾಮದಲ್ಲಿ ಸುಮಾರು 50 ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ವೈದ್ಯರ ಪ್ರಕಾರ ಚಿಕನ್ ಗುನ್ಯಾ, ಅಥವಾ ಡೆಂಗ್ಯೂ ಇರಬಹುದು ಎಂದು ತಿಳಿಸಿದ್ದಾರೆ, ಹಾಗಾಗಿ ಜನರು ಯಾವುದೇ ರೀತಿಯ ಭಯ ಪಡುವ ಆವಶ್ಯಕತೆ ಇಲ್ಲ ಅನಾರೋಗ್ಯಕ್ಕೆ ಒಳಗಾದ ಪ್ರತಿಯೊಬ್ಬರ ರಕ್ತ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಿಳಿಸಿದ್ದೇನೆ ಎಂದರು.

ಇನ್ನು ಗ್ರಾಮದಲ್ಲಿ ಕುಡಿಯುವ ನೀರಿನ ಸಂಬಂದ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದು, ಇಡೀ ಗ್ರಾಮಕ್ಕೆ ಫಾಗಿಂಗ್ ವ್ಯವಸ್ಥೆ ಮಾಡಲು ಗ್ರಾಮ ಪಂಚಾಯ್ತಿ ಪಿಡಿಒ ಅವರಿಗೆ ಸೂಚಿಸಿದ್ದೇನೆ, ಗ್ರಾಮಸ್ಥರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ದೈರ್ಯದಿಂದ ಇರಬೇಕು ಏನಾದರೂ ಸಮಸ್ಯೆ ಆದರೆ ನನ್ನ ಗಮನಕ್ಕೆ ತಕ್ಷಣ ತನ್ನಿ ಎಂದು ಗ್ರಾಮಸ್ಥರಿಗೆ ತಿಳಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಎಲ್.ಸಂತೋಷ ಕುಮಾರ್, ಬಸವರಾಜ್ ನಾಯ್ಕ್, ಶೇಖರ್ ನಾಯ್ಕ್, ರವಿಕುಮಾರ, ಯು.ಪಿ.ನಾಗರಾಜ್ ಸಂತೋಷ್, ವೈದ್ಯೆ ಅರ್ಪಿತಾ, ಗ್ರಾಮಲೆಕ್ಕಾಧಿಕಾರಿ ನಾಗರಾಜ್, ಸೇರಿದಂತೆ ಗ್ರಾಮಸ್ಥರು ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next