Advertisement
ನಿಮ್ಮ ಸಮಸ್ಯೆ ಆಲಿಸಲಿಕ್ಕೆ ಬಂದಿರುವೆ: ತಾವು ಗ್ರಾಮ ವಾಸ್ತವ್ಯ ಮಾಡುತ್ತಿರುವ ಉದ್ದೇಶವೇ ಜನರೊಂದಿಗೆ ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನುಆಲಿಸುವುದೇ ಆಗಿದೆ. ಕಳೆದ ಬಾರಿ ತಮ್ಮ ಜನ್ಮದಿನದಂದು ಜೇರಟಗಿ ಯಿಂದ ಆರಂಭಿಸಿದ ಗ್ರಾಮ ವಾಸ್ತವ್ಯ ಈಗ ವಡಗೇರಾಗೆ ಬಂದಿದೆ. ಇದು
ಹಾಗೆ ಮುಂದುವರೆಯಲಿದೆ ಎಂದರು. ಊರಿನ ಹಿರಿಯರಾದ ತಿರುಪತಿದೇಸಾಯಿ, ಬಾಪುಗೌಡ ಪಾಟೀಲ, ಶಂಕರಗೌಡ ಪೊಲೀಸ್ ಪಾಟೀಲ, ಮೌಲಾಲಿ ಮೆಣಸಿನಕಾಯಿ, ಗ್ರಾಪಂ ಅಧ್ಯಕ್ಷ ಹಸನಪ್ಪ ಚಲವಾದಿ, ಉಪಾಧ್ಯಕ್ಷ ಅಣ್ಣಾರಾಯ ಗೌಡ ಶಾಸಕರನ್ನು ಸ್ವಾಗತಿಸಿದರು.
ಶಾಸಕ ಡಾ| ಅಜಯಸಿಂಗ್ ವಡಗೇರಾದ ಕುಂಬಾರ ಸಮಾಜಕ್ಕೆ ಸೇರಿದ ಶಾಂತಪ್ಪ ಕುಂಬಾರ ಅವರ ಮನೆಯಲ್ಲಿ ಜೋಳದ ರೊಟ್ಟಿ, ಕಾಳುಪಲ್ಯೆ, ಹುಗ್ಗಿ, ಅನ್ನ, ಸಾಂಬಾರ್ ಊಟ ಮಾಡಿ, ವಾಸ್ತವ್ಯ ಮಾಡಿದರು. ನಂತರ ಸೇರಿದ್ದ ಜನರೊಂದಿಗೆ ಉದ್ದೇಶಿಸಿ ಮಾತನಾಡಿದ ಶಾಸಕರು, ಗ್ರಾಮಗಳನ್ನೆಲ್ಲ ಸುವರ್ಣ ಗ್ರಾಮಗಳನ್ನಾಗಿ ಮಾಡಲಾಗದು. ಆದರೆ ಅಲ್ಲಿನ ಜನರ ಬವಣೆಗಳನ್ನು ನೀಗಿಸುವ ಪ್ರಾಮಾಣಿಕ ಕೆಲಸವನ್ನು ತಾವು ಮಾಡುತ್ತೇವೆ ಎಂದು ಭರವಸೆ ನೀಡಿದರು. ವಡಗೇರಾದಲ್ಲಿ ಚರಂಡಿ ವ್ಯವಸ್ಥೆ, ಸಿಸಿ ರಸ್ತೆಗಳು ಬೇಕೆಂದು ಹಿರಿಯರು ಬೇಡಿಕೆ ಇಟ್ಟರು. ನಂತರ ಸಾರ್ವಜನಿಕ ಅಹವಾಲು ಸಭೆ ನಡೆಯಿತು. ಆನಂದ
ಆಶ್ರಮದ ವೀರಯ್ಯ ಮಹಾಸ್ವಾಮಿಗಳು, ಯಡ್ರಾಮಿ ತಹಶೀಲ್ದಾರ್ ಶಾಂತಗೌಡ ಬಿರಾದಾರ ಉಸ್ತುವಾರಿ ವಹಿಸಿದ್ದರು.
Related Articles
ಸೇರಿದಂತೆ ಮಳ್ಳಿ, ಹಂಗರಗಾ, ವಡಗೇರಾ, ಮಾಗಣಗೇರಾ, ಬಳಬಟ್ಟಿ ರೈತರು, ಸಾರ್ವಜನಿಕರು, ಮಹಿಳೆಯರು ತಮ್ಮ ಅಹವಾಲುಗಳನ್ನು ಶಾಸಕರಿಗೆ ಸಲ್ಲಿಸಿದರು.
Advertisement
ಹಂಗರಗಿ ಗ್ರಾಮಕ್ಕೆ ಕುಡಿಯುವ ನೀರು ಘಟಕ
ಹಂಗರಗಿ ಜನರು ಸಭೆಯಲ್ಲಿ ಮಾತನಾಡಿ ಊರಲ್ಲಿ ನೀರು ಕುಡಿಯಲು ಯೋಗ್ಯವಿಲ್ಲ ಎಂದು 2010ರಲ್ಲೇ ವರದಿ ನೀಡಲಾಗಿದೆ. ತಕ್ಷಣ ಶುದ್ಧ ಕುಡಿಯುವ ನೀರು ಘಟಕ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು, ಸಮಸ್ಯೆಗೆ ಸ್ಪಂದಿಸಿದ ಶಾಸಕರು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಯೋಜನೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.
ಅಕ್ರಮ ಮದ್ಯ ದೂರು ಬಂದ್ರೆ ಸಹಿಸೋದಿಲ್ಲ
ಸಭೆಯಲ್ಲಿ ಅನೇಕರು ತಮ್ಮೂರಲ್ಲಿ ಅಕ್ರಮ ಮದ್ಯ ಮಾರಾಟ ನಡೆದಿದೆ. ತಕ್ಷಣ ನಿಲ್ಲಿಸಿರಿ ಎಂದು ಕೋರಿದಾಗ, ಶಾಸಕರು ಅಲ್ಲೇ ಇದ್ದ ಅಬಕಾರಿ ಇಲಾಖೆ ಅಧಿ ಕಾರಿಯನ್ನು ಕರೆದು ಇಂತಹ ದೂರುಗಳು ಮತ್ತೆ ಕೇಳಿ ಬರದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.