Advertisement

ಪ್ರತಿಭಟನೆ ಮಾಡಿದ್ದವರೇ ಯೋಜನೆಗೆ ಚಾಲನೆ ನೀಡಿದ್ರು

03:38 PM Jun 12, 2023 | Team Udayavani |

ದೊಡ್ಡಬಳ್ಳಾಪುರ: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗೆ ಅಪಸ್ವರ ವ್ಯಕ್ತಪಡಿಸಿ ಒಂದು ವಾರದ ಹಿಂದೆಯಷ್ಟೇ ಶಾಸಕ ಧೀರಜ್‌ ಮುನಿರಾಜು ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ ಅದೇ ಶಾಸಕರು ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡುವಂತಾಗಿತ್ತು.

Advertisement

ಈ ನಡುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಶಿಷ್ಟಾಚಾರ ಹಾಗೂ ಸಂಭ್ರಮೋತ್ಸವ ವಿಚಾರವಾಗಿ ಮಾತಿನ ಜಟಾಪಟಿ ನಡೆದು ಯೋಜನೆಯ ಕುರಿತಾದ ಫ್ಲೆಕ್ಸ್‌ ಅನ್ನು ಪೊಲೀಸರ ಸೂಚನೆಯಂತೆ ತೆರವು ಮಾಡಲಾಯಿತು.

ನಂತರ ಕಾರ್ಯಕರ್ತರ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಪರಿವರ್ತನೆಯಾಗಿತ್ತು. ಎರಡೂ ಪಕ್ಷದ ಕಾರ್ಯಕರ್ತರ ಜೈಕಾರ, ಪೊಲೀಸರೊಂದಿಗೆ ವಾಗ್ವಾದಗಳು ಏನು ಅನ್ನುವುದು ಅರ್ಥ ವಾಗದೇ ಬಸ್‌ ನಿಲ್ದಾಣದಲ್ಲಿ ಇದ್ದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಸಾರಿಗೆ ನಿಗಮದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಚಾಲನೆಗೆ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಬಸ್‌ ನಿಲ್ದಾಣದಲ್ಲಿ ವೇದಿಕೆ ಸಿದ್ಧಮಾಡಲಾಗಿತ್ತು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನವೇ ಬಿಜೆಪಿ ಮುಖಂಡರು ವೇದಿಕೆಯ ಮುಂಭಾಗದಲ್ಲಿನ ಖುರ್ಚಿಗಳಲ್ಲಿ ಕುಳಿತಿದ್ದರು. ವೇದಿಕೆಗೆ ಶಾಸಕ ಧೀರಜ್‌ ಮುನಿರಾಜು ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಶಿಷ್ಟಾಚಾರ ಹೊರತುಪಡಿಸಿ ವೇದಿಕೆಯಲ್ಲಿ ಕುಳಿತುಕೊಳ್ಳಲು ಯಾರಿಗೂ ಅವಕಾಶ ನೀಡಬಾರದು’ ಎಂದು ಅಧಿಕಾರಿಗಳಿಗೆ ಹೇಳಲು ಮುಂದಾದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಅಂತಿಮವಾಗಿ ತಹಶೀಲ್ದಾರ್‌ ಮೋಹನ ಕುಮಾರಿ ಸೂಚನೆಯಂತೆ ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷರು, ಚುನಾಯಿತ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ನೀಡಿದರು.

ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಪಕ್ಷದ ಜಿಲ್ಲಾ ವಕ್ತಾರ ಜಿ.ಲಕ್ಷ್ಮೀಪತಿ ಅವರಿಗೂ ವೇದಿಕೆಯಲ್ಲಿ ಅವಕಾಶ ನೀಡಿದ್ದರಿಂದ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ತಹಶೀಲ್ದಾರ್‌ ಅವರ ಸಮಜಾಯಿಸಿದರು.

Advertisement

ಕೈ ಕಾರ್ಯಕರ್ತರ ಸಂಭ್ರಮಕ್ಕೆ ಬ್ರೇಕ್‌: ಜಟಾಪಟಿ

ದೊಡ್ಡಬಳ್ಳಾಪುರ: ಮಹಿಳಾ ಪ್ರಯಾಣಿಕರ ಉಚಿತ ಬಸ್‌ ಪ್ರಯಾಣ ಶಕ್ತಿ’ಯೋಜನೆಯ ಅಂಗವಾಗಿ ವಿಜ ಯೋತ್ಸವ ನಡೆಸಲು ಕಾಂಗ್ರೆಸ್‌ ಬಾವುಟಗಳೊಂದಿಗೆ ನಗರದ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಕ್ಕೆ ಪ್ರವೇಶ ಮಾಡದಂತೆ ಕಾರ್ಯಕರ್ತರಿಗೆ ಪೊಲೀಸರು ತಡೆಯೊಡ್ಡಿದ್ದರಿಂದ ಕಾಂಗ್ರೆಸ್‌ ಮುಖಂಡರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಕಿದ್ದ ಯೋಜನೆಯ ಕುರಿತಾದ ಫ್ಲೆಕ್ಸ್‌ ಅನ್ನು ಪೊಲೀಸರ ಸೂಚನೆಯಂತೆ ತೆರವು ಮಾಡಲಾಯಿತು. ನಂತರ ಪಕ್ಷದ ಬಾವುಟಗಳು ಇಲ್ಲದೆಯೇ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಶಕ್ತಿ ಯೋಜನೆಗೆ ಶಾಸಕ ಧೀರಜ್‌ ಮುನಿರಾಜ್‌ ಚಾಲನೆ ನೀಡಿದ ನಂತರ ಬಸ್‌ಗಳಲ್ಲಿ ಕುಳಿತಿದ್ದ ಪ್ರಯಾಣಿರಿಗೆ ಸಿಹಿ ಹಂಚಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next