Advertisement

ವಿವಿಧೆಡೆ ಶಾಸಕ ದಢೇಸೂಗೂರು ಭೇಟಿ

11:10 PM May 22, 2021 | Team Udayavani |

ಕಾರಟಗಿ: ಶ್ರೀರಾಮನಗರದಲ್ಲಿ ಸುಸಜ್ಜಿತ ಆಮ್ಲಜನಕಯುಕ್ತ ಆಸ್ಪತ್ರೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕದ ಲೋಡ್‌ ಇಳಿಯುತ್ತಿದ್ದಂತೆ ಶಾಸಕ ಬಸವರಾಜ ದಢೇಸೂಗೂರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ನಂತರ ಮಾತನಾಡಿದ ಅವರು, ತರಬೇತಿ ಹೊಂದಿದ ಕೋವಿಡ್‌ ತಜ್ಞ ವೈದ್ಯರು, ಸಿಬ್ಬಂದಿ ಬರುವವರಿದ್ದು, ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಚಾಲನೆ ನೀಡಿ ಆಮ್ಲಜನಕದ ಕೊರತೆ ನೀಗಿಸುವ ಕೆಲಸಕ್ಕೆ ಮುಂದಾಗುವುದಾಗಿ ತಿಳಿಸಿದರು. ನಂತರ ಶ್ರೀರಾಮ ನಗರದ ಡಿಗ್ರಿ ಕಾಲೇಜಿನಲ್ಲಿನ ಕೋವಿಡ್‌ ಆರೈಕೆ ಕೇಂದ್ರ ಸೇರಿದಂತೆ ಕಾರಟಗಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿನ ಕೇಂದ್ರ, ನವಲಿ ಹಾಗೂ ಚಿಕ್ಕಮಾದಿನಾಳಲ್ಲಿನ ಆರೈಕೆ ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.

ಕೇಂದ್ರದಲ್ಲಿ ಸೋಂಕಿತರೊಂದಿಗೆ ಚರ್ಚಿಸಿ ಧೈರ್ಯ ತುಂಬಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸವರಾಜ ದಢೇಸೂಗೂರ, ಕೋವಿಡ್‌ ಸೋಂಕಿತರ ಅನುಕೂಲಕ್ಕಾಗಿ ಶ್ರೀರಾಮ ನಗರದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯದೊಂದಿಗೆ ಆಮ್ಲಜನಕಯುಕ್ತ ಕೇಂದ್ರ ಆರಂಭಿಸಲಾಗುತ್ತಿದೆ.

ಇನ್ನು ರೋಗಿಗಳ ಅನುಕೂಲಕ್ಕಾಗಿ ಊಟ-ಉಪಚಾರ, ಶುದ್ಧ ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕೇಂದ್ರದಲ್ಲಿ ಕಲ್ಪಿಸಲಾಗಿದೆ ಎಂದರು. ಈ ವೇಳೆ ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೊಳ್ಳಿ, ತಾಪಂ ಇಒ ಚಂದ್ರಶೇಖರ, ತಾಪಂ ಎ.ಡಿ. ಮಲ್ಲಿಕಾರ್ಜುನ ಕಡಿವಾಳ, ಮುಖಂಡ ವೀರೇಶ ಸಾಲೋಣಿ ಸೇರಿದಂತೆ ಕಂದಾಯ, ಪೊಲೀಸ್‌, ಆರೋಗ್ಯ ಇಲಾಖೆ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next