Advertisement
ಮಲೆನಾಡು ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬವನ್ನು ಬಹಳ ಸಡಗರ- ಸಂಭ್ರಮ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತಿದೆ. ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ , ಹಳಿಯೂರು, ದೋಣುಗುಡಿಗೆ ,ಹವ್ವಳ್ಳಿ , ಹಳೆ ಆಲ್ದೂರು , ಕೆಳಗೂರು ಗ್ರಾಮಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.ಸುಗ್ಗಿ ಕಟ್ಟೆಯಲ್ಲಿ ಅಂಬು ಹೊಡೆದು, ಕೋಲಾಟವಾಡಿ ದೇವರ ಅಡ್ಡೆಗಳಿಗೆ ಕಡ್ಲೆ ಬೀರುವ ಮೂಲಕ ಹಬ್ಬ ಮುಕ್ತಾಯವಾಯಿತು. ಹವ್ವಳ್ಳಿ ಗ್ರಾಮದ ಸಬಲಮ್ಮ ದೇವಿರಮ್ಮನವರ ಸುಗ್ಗಿ ಭಂಡಾರದಲ್ಲಿ ದೇವರ ಅಡ್ಡೆಗಳನ್ನು ಕುಣಿಸಿ ವಿಶೇಷ ಪ್ರಾರ್ಥನೆ ಮಾಡಿ ಸಂಪನ್ನಗೊಳಿಸಲಾಯಿತು.