ಮೇಲುಕೋಟೆ: ಭಕ್ತರು ಮತ್ತು ಗ್ರಾಮಸ್ಥರ ನಡುವೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ಸರಳತೆ ಮೆರೆದಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.
ಮೇಲುಕೋಟೆ ಬೆಟ್ಟದ ಹಿಂಭಾಗದ ಹುಣಿಸೇ ತೋಪಿನಲ್ಲಿರುವ ಪುರಾತನ ಆಂಜನೇಯಸ್ವಾಮಿಗೆ ಆ ಭಾಗದ ರೈತರು ಪ್ರತಿ ವರ್ಷದಂತೆ ಶನಿವಾರ ಅಭಿಷೇಕ ಏರ್ಪಡಿಸಿ ಶಾಸಕರನ್ನು ಆಹ್ವಾನಿಸಿದ್ದರು. ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಶಾಸಕರು ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮನೆಯೊಂದರಲ್ಲಿ ಪ್ರತ್ಯೇಕ ವಾಗಿ ಶಾಸಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತಾದರೂ ಭಕ್ತರ ನಡುವೆ ಬಂದ ಶಾಸಕರು, ಅವರ ಮಧ್ಯೆ ಕುಳಿತು ಕದಂಬ, ಮೊಸರನ್ನ ಹಾಲು ಪಾಯಸ ಸೇವಿಸಿದರು. ಮೇಲುಕೋಟೆ ಪ್ರಸಾದದ ರುಚಿಗೆ ಸರಿಯಾಟಿ ಯಾವುದೂ ಇಲ್ಲ ಎಂದರು.
ಅಭಿಷೇಕದ ನಂತರ ಏರ್ಪ ಡಿಸಿದ್ದ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಭಕ್ತರು ಭಾಗವ ಹಿಸಿ ಪ್ರಸಾದ ಸ್ವೀಕರಿಸಿದರು.
ಅಜ್ಜನಕಟ್ಟೆ ಸಂಪತ್‌ಕುಮಾರನ್ ಹನುಮನಿಗೆ ಅಭಿಷೇಕದ ವಿಧಿವಿಧಾನ ನೆರವೇರಿಸಿ ಭವ್ಯವಾಗಿ ಅಲಂಕಾರ ಮಾಡಿದ್ದರು. ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಸಿ.ಎಸ್.ಪುಟ್ಟರಾಜು ವೆಂಕಟರಮಣಸ್ವಾಮಿ ಕೊಳದ ಬಳಿಯಿಂದ ಮೇಲುಕೋಟೆಯ ಹುಣಿಕೆ ಹಟ್ಟಿಯವರೆಗೆ ಡಾಂಬರು ರಸ್ತೆ ನಿರ್ಮಿಸಲು ಯೋಜನೆ ತಯಾರಿಸಿ ಶೀಘ್ರವಾಗಿ ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸಲು ಕಾರ್ಯ ಪ್ರವೃತ್ತರಾಗಿ ಎಂದು ಸೂಚಿಸಿದರು.
ಗ್ರಾಪಂ ಸದಸ್ಯರಾದ ಜಿ.ಕೆ.ಕುಮಾರ್, ಮುಖಂಡರಾದ ಯೋಗಾ ನರಸಿಂಹೇ ಗೌಡ, ಜವರೇಗೌಡ, ಚೆಲುವೇಗೌಡ, ಜಿ.ಸಿ. ಯೋಗಾನರಸಿಂಹೇಗೌಡ, ಶ್ರೀನಿವಾಸ್, ಬಲರಾಮೇಗೌಡ, ಅಶೋಕ್, ಪುಳಿಯೋಗರೆ ರವಿ, ದೇವರಾಜು ಪರುಶುರಾಮ, ನಾಗೇಗೌಡ ಮತ್ತಿತರರಿದ್ದರು.