Advertisement

ಕೆರೆ ನಿರ್ಮಾಣಕ್ಕೆ ಒತ್ತು : ಚಂದ್ರಪ್ಪ

06:29 PM Mar 03, 2021 | Team Udayavani |

ಹೊಳಲ್ಕೆರೆ: ಜೀವಜಲ ಉಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆ ನಿರ್ಮಾಣಕ್ಕೆ ಒತ್ತು ನೀಡಿಲಾಗಿದ್ದು, ತಾಲೂಕಿನ ಕಡೂರು ಅಂತಾಪುರದ ಕಾವಲ್‌ ಭಾಗದಲ್ಲಿ 1 ಕೋಟಿ ಅನುದಾನದ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

Advertisement

ತಾಲೂಕಿನ ಕಡೂರು ಹಾಗೂ ಅಂತಾಪುರ ಕಾವಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕೆರೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಎಲ್ಲಾ ಜೀವಿಗಳಿಗೆ ಅಗತ್ಯವಾದ ರುಚಿ ಸಹಿತವಾದ ಶುದ್ಧ ಕುಡಿಯುವ ನೈಸರ್ಗಿಕವಾಗಿ ನೀರು ಕಲ್ಪಿಸಲು ಸರಕಾರ ಸಾಕಷ್ಟು ಯೋಜನೆ ರೂಪಿಸುವ ಮೂಲಕ ನಾಗಕರಿಕ ಸಮಾಜಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿದೆ ಎಂದರು.

ಬರದ ನಾಡು ಎನ್ನುವ ಖ್ಯಾತಿಯಿಂದ ಹತ್ತಾರು ವರ್ಷಗಳಿಂದ ಕಡೂರು ಅಂತಾಪುರ ಗ್ರಾಮಗಳಿಲ್ಲಿ ಕುಡಿಯುವ ನೀರು ಎನ್ನುವುದು ಇಲ್ಲಿನ ಜನರಿಗೆ ಮರೀಚಿಕೆ ಎನ್ನುವಂತ ಸ್ಥಿತಿ ಇತ್ತು. ಇತ್ತೀಚೆಗೆ ಸರಕಾರಿ ಸೌಲಭ್ಯಗಳನ್ನು ಭರಪೂರವಾಗಿ ಕಲ್ಪಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ನೀರು ಹರಿದು ಬರುತ್ತಿದೆ. ಅದರೂ ಅಂತರ್ಜಲ ಕುಸಿದಾಗ ಕೊಳವೆ ಬಾವಿಗಳು ಬತ್ತಿ ನೀರಿಲ್ಲದೆ ಪರಿತಪಿಸುವಂತಹ ಸ್ಥಿತಿ ಸಾಮಾನ್ಯವಾಗಲಿದೆ. ಕೆರೆಗಳ ಕಟ್ಟುವುದು, ಅಭಿವೃದ್ಧಿಗೆ ಒತ್ತು ನೀಡುವುದು. ಹರಿಯುವ ನೀರು ತಡೆಯುವುದು ಸೇರಿದಂತೆ ನೀರು ನಿಲ್ಲಿಸುವ ಕೆಲಸಗಳನ್ನು ಹೆಚ್ಚಾಗಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರು ಉಳಿಸಲು ಸಂರಕ್ಷಣೆ ಮಾಡಬೇಕಿದೆ ಎಂದರು. ಜಿ.ಪಂ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next