Advertisement

ಪುನರ್ವಸತಿ ಅನಿವಾರ್ಯ: ಯತ್ನಾಳ

07:49 PM Mar 15, 2021 | Team Udayavani |

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ ಯಶಸ್ವಿಯಾಗಬೇಕಾದರೆ ಭೂಸ್ವಾಧೀನ ಹಾಗೂ ಗ್ರಾಮಗಳ ಪುನರ್ವಸತಿ ಮಾಡುವುದು ಅನಿವಾರ್ಯ. ಈ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರದ ಬಗ್ಗೆ ಸೋಮವಾರದಂದು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವದು ಎಂದು ಶಾಸಕ, ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ರವಿವಾರ ಸಮೀಪದ ವಂದಾಲ ಗ್ರಾಮವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಮುಳುಗಡೆ ಮಾಡುವುದಾಗಿ ಹೇಳಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಬಂಧಿ  ಸಿರುವದನ್ನು ಖಂಡಿಸಿ ನಾಗರಿಕ ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿ ಅವರು ಮಾತನಾಡಿದರು.

ವಂದಾಲ ಗ್ರಾಮಸ್ಥರು ನಡೆಸುತ್ತಿರುವ ಹೋರಾಟವು ನ್ಯಾಯೋಚಿತವಾಗಿದೆ. ಯೋಜನೆಯ ಅನುಷ್ಠಾನದ ಸ್ಪಷ್ಟ ನಿರ್ಧಾರದ ನಂತರ ಮುಳುಗಡೆ ನಿಯಮದಂತೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ 2013ರಿಂದ ಇಲ್ಲಿಯವರೆಗೂ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳುವುದನ್ನು ನಿರ್ಬಂಧಿ ಸಿರುವುದರಿಂದ ಸಹಜವಾಗಿ ನಾಗರಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳ ಬಳಿ ಜಲ ಸಂಪನ್ಮೂಲ ಖಾತೆ ಇರುವುದರಿಂದ ಅವರಲ್ಲಿ ಕುರಿತು  ಅ ಧಿವೇಶನದಲ್ಲಿ ಪ್ರಸ್ತಾಪಿಸಿ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.

ಬಾಧಿ ತಗೊಳ್ಳುವ ಗ್ರಾಮಗಳಿಗೆ ನೂತನ ಮಾರುಕಟ್ಟೆ ದರದಂತೆ ಪರಿಹಾರ ನೀಡುವಂತಾಗಬೇಕು. ಯೋಜನೆಯ ಸಾಫಲ್ಯಕ್ಕೆ ಆಲಮಟ್ಟಿ ಜಲಾಶಯವನ್ನು 519.6 ಮೀ.ದಿಂದ 524.256 ಮೀ.ಗೆ ಎತ್ತರಿಸುವುದು ಅನಿವಾರ್ಯತೆಯಿದೆ. ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಾನೂನಿಗೆ ಪುನರ್‌ ಪರಿಶೀಲನೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ನಿಧಿಗೆ ನ್ಯಾಯ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

5ನೇ ದಿನದ ಧರಣಿಯಲ್ಲಿ ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ವಿಜಯಪುರ ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬಿ.ಆರ್‌. ದೊಡ್ಡಪ್ಪನವರ, ಸಂಗಯ್ಯ ಚಿಕ್ಕಮಠ, ಬಸವರಾಜ ಗುಂಗಿ, ಅರ್ಜುನ ದಳವಾಯಿ, ನಿಂಗಪ್ಪ ಇಜೇರಿ, ಭೀಮಪ್ಪ ಬಂಡಿ, ಅಂದಾನಪ್ಪ ಹತ್ತರಕಿಹಾಳ ಹಾಗೂ 50ಕ್ಕೂ ಅ ಧಿಕ ಮಹಿಳಾ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next