ನಂಜನಗೂಡು: 75ನೇ ಸ್ವಾತಂತ್ರ್ಯಅಮೃತ ಮಹೋತ್ಸವದ ಸಂಭ್ರಮದಲ್ಲಿ ದಕ್ಷಿಣ ಕಾಶಿಯ ಶಾಸಕನಾಗಿರುವುದು ನನಗೆ ಹೆಮ್ಮೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿರುವ ಈ ಸಂದರ್ಭದಲ್ಲಿ ನಾನು ಈ ಕ್ಷೇತ್ರದ ಶಾಸಕನಾಗಿದ್ದೆ ಎಂಬುದೇ ಹೆಮ್ಮೆಯ ಸಂಗತಿ. ಇಂತಹ ಅವಕಾಶವನ್ನು ಕಲ್ಪಿಸಿಕೊಟ್ಟ ನಂಜನಗೂಡು ಕ್ಷೇತ್ರದ ಮತದಾರರಿಗೆ ನಾನು ಅಭಾರಿಯಾಗಿದ್ದೇನೆ. ತಾಲೂಕಿಗೆ ಈವರೆಗೂ 600 ಕೋಟಿ ರೂ. ಅನುದಾನ ತಂದಿರುವ ತೃಪ್ತಿ ಇದೆ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ಎಂ.ಶಿವಮೂರ್ತಿ ಮಾತನಾಡಿ, ಈ 75 ವರ್ಷದಲ್ಲಿ ದೇಶ ಸಾಕಷ್ಟು ಬದಲಾವಣೆ ಕಂಡಿದೆ. ಮೌಡ್ಯತೆಯಿಂದ ದೇಶ ಹೊರಬಂದಿದೆ.
ದೂರಸಂಪರ್ಕ ಕ್ಷೇತ್ರ, ಮಾತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿಯಿಂದಾಗಿ ಜನರ ಜೀವನ ಸಾಕಷ್ಟು ಸುಧಾರಿಸಿದೆ. ಕೋಡ್ ಪರಿಸ್ಥಿತಿಯನ್ನು ನಿಭಾಯಿಸಿದ ಪರಿ ವಿಶ್ವಕ್ಕೆ ಮಾದರಿಯಾಗಿದೆ. 200 ಕೋಟಿ ಕೋಡ್ ಲಸಿಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಆಕರ್ಷಕ ಪಥಸಂಚಲನ: ಧ್ವಜಾರೋಹಣ ಅಂಗವಾಗಿ ಪೊಲೀಸರು ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನ ಆಕರ್ಷಣೀಯವಾಗಿತ್ತು. ಪಿಎಸ್‌ಐ ವಿಜಯರಾಜು ನೇತೃತ್ವದಲ್ಲಿ ಪೊಲೀಸರು ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.
ತಹಶೀಲ್ದಾರ್ ಎಂ.ಶಿವಮೂರ್ತಿ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ವಾಹನದಲ್ಲಿ ಶಾಸಕ ಬಿ.ಹರ್ಷವರ್ಧನ್, ತಹಸೀಲ್ದಾರ್ ಶಿವಮೂರ್ತಿ ವಿದ್ಯಾರ್ಥಿಗಳ ಬಳಿಗೆ ತೆರಳಿ ಗೌರವ ವಂದನೆ ಸ್ವೀಕರಿಸಿದರು.