Advertisement

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

12:54 AM May 29, 2024 | Team Udayavani |

ಐಜ್ವಾಲ್‌: ರೆಮಲ್‌ ಚಂಡ ಮಾರುತ ದಿಂದಾಗಿ ಸುರಿದ ಭಾರೀ ಮಳೆಗೆ ಮಿಜೋರಾಂನಲ್ಲಿ ಕಲ್ಲುಕ್ವಾರಿ ಕುಸಿದಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಇನ್ನೂ 7 ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತ ಪಡಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ ಮಳೆ ಸಂಬಂಧಿಸಿದ ದುರ್ಘ‌ಟನೆಗಳಲ್ಲಿ 22 ಮಂದಿ ಸಾವನ್ನಪ್ಪಿದ್ದಾರೆ.

Advertisement

ಐಜ್ವಾಲ್‌ ನಗರದ ಸಮೀಪ ಇರುವ ಮೇಲು¤ಮ್‌ ಮತ್ತು ಹ್ಲಿàಮೇನ್‌ ಬಳಿ ಕ್ವಾರಿ ಕುಸಿದಿದೆ. “ಈವರೆಗೆ ನಾವು 17 ಮೃತದೇ ಹ ಗಳನ್ನು ಹೊರತೆಗೆದಿದ್ದೇವೆ. ರಕ್ಷಣ ಕಾರ್ಯಾಚರಣೆ ಮುಂದುವರೆಸ ಲಾಗಿದ್ದು, ಇನ್ನೂ 6ರಿಂದ 7 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭಾರಿ ಮಳೆ ಸುರಿಯುತ್ತಿರುವ ಕಾರಣ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವಶೇಷಗಳಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ. ಅಲ್ಲದೇ ಭೂಕುಸಿತದಿಂದಾಗಿ ಐಜ್ವಾಲ್‌ ಹಾಗೂ ಭಾರತದ ನಡುವಿನ ಸಂಪರ್ಕ ಕಡಿದು ಹೋಗಿದೆ.

4 ಲಕ್ಷ ಪರಿಹಾರ ಘೋಷಣೆ
ದುರ್ಘ‌ಟನೆಯಲ್ಲಿ ಮೃತ ಪಟ್ಟವರ ಕುಟುಂಬ ಗಳಿಗೆ ಮುಖ್ಯಮಂತ್ರಿ ಲಾಲುªಹೋಮಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ 8 ಮಿಜೋ ಕುಟುಂಬಗಳಿಗೆ 2 ಲಕ್ಷ ರೂ.ನ ಚೆಕ್‌ ವಿತರಿಸಿ ದ್ದಾರೆ. ಮೃತಪಟ್ಟವ ರಲ್ಲಿ ನಾಲ್ವರು ಮಿಜೋರಾಂ ನವರಲ್ಲ ಎಂದು ತಿಳಿದು ಬಂದಿದೆ. ಒಂದು ವೇಳೆ ಅವರು ಹೊರಗಿನವರು ಎಂಬುದು ಖಚಿತವಾದರೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಗೃಹ ಸಚಿವ ಕೆ. ಸಪ್ತಾಂಗ ಹೇಳಿದ್ದಾರೆ.

ಶಾಲಾ ಕಾಲೇಜುಗಳಿಗೆ ರಜೆ
ಭಾರೀ ಮಳೆಯ ಪರಿಣಾಮ ರಾಜ್ಯದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ಅಲ್ಲದೇ ಸರಕಾರಿ ನೌಕರರಿಗೂ ಸಹ ರಜೆ ನೀಡಲಾಗಿದ್ದು, 30 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ದುರ್ಘ‌ಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next