Advertisement

Mizoram: ರ್ಯಾಲಿಯೂ ಇಲ್ಲ, ಬ್ಯಾನರೂ ಇಲ್ಲ- ಇಲ್ಲಿನ ಚುನಾವಣೆಯಲ್ಲಿ ಎಲ್ಲವೂ ಶಾಂತಿಯುತ!

08:31 PM Nov 04, 2023 | Pranav MS |

ಚುನಾವಣೆ ಬಂತೆಂದರೆ ಸಾಕು, ರಾಜಕೀಯ ಚಟುವಟಿಕೆಗಳು ಗರಿಗೆದರಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ದೊಡ್ಡ ದೊಡ್ಡ ರ್ಯಾಲಿಗಳು, ಘಟಾನುಘಟಿಗಳ ಪ್ರಚಾರ, ಬೃಹತ್‌ ಕಟೌಟ್‌ಗಳು, ಬ್ಯಾನರ್‌ಗಳು, ಬೀದಿ ಬೀದಿಗಳಲ್ಲೂ ಸಾರ್ವಜನಿಕ ಸಭೆಗಳು, ಬ್ಲಾಕ್‌ ಆದ ರಸ್ತೆಗಳು, ಸಂಚಾರ ದಟ್ಟಣೆ… ಇವೆಲ್ಲವನ್ನೂ ನೋಡಿದರೆ ಆ ರಾಜ್ಯದಲ್ಲಿ “ಚುನಾವಣೆಯಿದೆ’ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಸ್ತುತ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಲ್ಲೂ ಇದೇ ಸ್ಥಿತಿಯಿದೆ. ಆದರೆ, ಮಿಜೋರಾಂನಲ್ಲಿ ಮಾತ್ರ ಭಿನ್ನ ಸ್ಥಿತಿಯಿದೆ. ಅಲ್ಲಿ ಯಾವುದೇ ರ್ಯಾಲಿ, ಗದ್ದಲ-ಗಲಾಟೆಗಳಿಲ್ಲದೇ “ಮೌನ’ವಾಗಿಯೇ ಪ್ರಚಾರಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಚರ್ಚ್‌ ಬೆಂಬಲಿತ ಮಿಜೋ ಪೀಪಲ್ಸ್‌ ಫೋರಂ(ಎಂಪಿಎಫ್) ಚುನಾವಣೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುತ್ತಿದೆ.

Advertisement

ಎಂಪಿಎಫ್ ಸಂಸ್ಥೆಯು ಪ್ರತಿಯೊಂದು ಕ್ಷೇತ್ರದಲ್ಲೂ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೆ ಒಂದು “ಸಾಮಾನ್ಯ ವೇದಿಕೆ’ಯನ್ನು ಕಲ್ಪಿಸಿಕೊಡುತ್ತದೆ. ಅಲ್ಲಿ ನಡೆಯುವ ಸಮುದಾಯ ಸಭೆಗೆ ಆ ಕ್ಷೇತ್ರದ ಜನರು ಬರುತ್ತಾರೆ. ತಾಳ್ಮೆಯಿಂದ ತಮ್ಮ ಅಭ್ಯರ್ಥಿಗಳ ಮಾತುಗಳನ್ನು ಆಲಿಸುತ್ತಾರೆ. ಪ್ರತಿ ಅಭ್ಯರ್ಥಿಗೂ ತಮ್ಮ ವಿಚಾರಗಳನ್ನು ಮಂಡಿಸಲು ತಲಾ 20 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಇಲ್ಲಿ ಯಾರೂ ಯಾರ ಪರವೂ ಘೋಷಣೆಗಳನ್ನು ಕೂಗುವಂತಿಲ್ಲ. ಎಲ್ಲವೂ ಶಾಂತಿಯುತವಾಗಿಯೇ ನಡೆಯುತ್ತದೆ. ಮತದಾನವೂ ಶಾಂತಿಯುತವಾಗಿಯೇ ಮುಗಿಯುತ್ತದೆ. ಈ ಮೂಲಕ ಮಿಜೋರಾಂನ ಅಭ್ಯರ್ಥಿಗಳು ಹಾಗೂ ನಾಗರಿಕರು ದೇಶಕ್ಕೇ ಮಾದರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next