Advertisement

ಮಿಜೋರಾಂ ಸಿಎಂ : ಹುಟ್ಟೂರ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ವಿಫ‌ಲ

04:35 PM Nov 07, 2018 | Team Udayavani |

ಐಜಾಲ್‌ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದ್ದ ಮಿಜೋರಾಂ ಮುಖ್ಯಮಂತ್ರಿ ಲಾಲ್‌ ಥನವಾಲಾ ಅವರಿಗೆ ತಮ್ಮ ಹುಟ್ಟೂರ ಕ್ಷೇತ್ರವಾದ ಸರ್ಚಿಪ್‌ ನಿಂದ ಸ್ಪರ್ಧಿಸುವುದಕ್ಕೆ ಇಂದು  ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ.

Advertisement

ಮುಖ್ಯ ಚುನಾವಣಾಧಿಕಾರಿ (ಸಿಇಓ) ಅವರನ್ನು ಕಿತ್ತೂಗೆಯಬೇಕೆಂದು ಆಗ್ರಹಿಸಿ ಅವರ ಕಾರ್ಯಾಲಯದ ಮುಂದೆ ಇಂದು ಪ್ರತಿಭಟನಕಾರರು ಪಿಕೆಟಿಂಗ್‌ ನಡೆಸಿದ ಕಾರಣ ಸಿಎಂ ಥನವಾಲಾ ಅವರಿಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. 

ಡಿಸಿ ಕಚೇರಿ ಸಂಕೀರ್ಣದಲ್ಲೇ ನಿರ್ವಚನಾಧಿಕಾರಿಯ ಕಾರ್ಯಾಲಯ ಇರುವುದರಿಂದ ಸಿಎಂ ನಾಮಪತ್ರ ಸಲ್ಲಿಕೆಗೆ ಅಡಚಣೆ ಉಂಟಾಯಿತು ಎಂದು ಹೆಚ್ಚುವರಿ ಇಸಿ ಚೌಹುನಾ ತಿಳಿಸಿದರು. 

ಹಾಗಿದ್ದರೂ ಸಿಎಂ ಥನವಾಲಾ ಅವರಿಗೆ ನಾಮಪತ್ರ ಸಲ್ಲಿಸದಂತೆ ಯಾರೂ ತಡೆದಿರಲ್ಲ; ನಾಮಪತ್ರ ಸಲ್ಲಿಸದಿರುವ ನಿರ್ಧಾರ ಅವರದ್ದೇ ಆಗಿತ್ತು ಎಂದು ಚೌಹುನಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next