Advertisement

ದಯಾಮರಣ ತೀರ್ಪಿಗೆ ಮಿಶ್ರ ಪ್ರತಿಕ್ರಿಯೆ

06:40 AM Mar 11, 2018 | Team Udayavani |

ಹೊಸದಿಲ್ಲಿ: ದಯಾಮರಣಕ್ಕೆ ಅನುಮತಿ ಕಲ್ಪಿಸಿ ಸುಪ್ರೀಂಕೋರ್ಟ್‌ ಶುಕ್ರವಾರ ನೀಡಿದ ತೀರ್ಪಿಗೆ ಸಮಾಜದ ವಿವಿಧ ಕ್ಷೇತ್ರಗಳಿಂದ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ವೈದ್ಯಕೀಯ ವಲಯ ಈ ನಿರ್ಧಾರವನ್ನು ಸ್ವಾಗತಿಸಿದೆ. ಅಲ್ಲದೆ ಜೈನ ಮುನಿ ತರುಣ ಸಾಗರ ಕೂಡ ಇದನ್ನು ಸ್ವಾಗತಿಸಿದ್ದಾರೆ. ಆದರೆ ಕೆಥೋಲಿಕ್‌ ಚರ್ಚ್‌ ಇದನ್ನು ವಿರೋಧಿಸಿದ್ದು, ಬದುಕುವ ಹಕ್ಕು ದೇವರ ಕೈಯಲ್ಲಿರುತ್ತದೆ. ವೃದ್ಧಾಪ್ಯ ಅಥವಾ ಅನಾರೋಗ್ಯದಿಂದಾಗಿ ಬಳಲುತ್ತಿರುವ ವ್ಯಕ್ತಿಯನ್ನು ಹತ್ಯೆಗೈಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. 

ಇನ್ನೊಂದೆಡೆ ನೇರ ದಯಾಮರಣಕ್ಕೆ ಅವಕಾಶ ಕೋರಿ ರಾಷ್ಟ್ರಪತಿಗೆ ಮನವಿ ಮಾಡಿದ್ದ ನಾರಾಯಣ ಲವಾಟೆ ಸುಪ್ರೀಂಕೋರ್ಟ್‌ನ ಈ ತೀರ್ಪು ನಿರಾಸೆ ಮೂಡಿಸಿದೆ ಎಂದಿದ್ದಾರೆ. 

ಸುಪ್ರೀಂಕೋರ್ಟ್‌ ಕೇವಲ ಪರೋಕ್ಷ ದಯಾ ಮರಣಕ್ಕೆ ಅವಕಾಶ ನೀಡಿದೆ. ವೃದ್ಧರ ಬಗ್ಗೆಯೂ ಕೋರ್ಟ್‌ ಯೋಚನೆ ಮಾಡಬೇಕಿತ್ತು. ಈಗ ಸರಕಾರಕ್ಕೆ ನೇರ ದಯಾಮರಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸುವ ಸಮಯವಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next