ಹೊಸದಿಲ್ಲಿ: ಒಂದು ಮತ್ತು ಎರಡನೇ ಡೋಸ್ ಸಂದರ್ಭ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳು ಅದಲು ಬದಲಾದರೆ ಪ್ರತಿಕಾಯ ಉತ್ಪಾದನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
– ಇದು ಭಾರತೀಯ ವೈದ್ಯ ಕೀಯ ಸಂಶೋಧನ ಮಂಡಳಿ (ಐಸಿಎಂಆರ್) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. ಉತ್ತರ ಪ್ರದೇಶದಲ್ಲಿ 98 ಮಂದಿಗೆ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳನ್ನು ಅದಲು ಬದಲಾಗಿಸಿ ನೀಡಲಾಗಿತ್ತು.
ಇತರ ರಾಷ್ಟ್ರಗಳಲ್ಲಿಯೂ ಕೆಲವು ತಿಂಗಳುಗಳ ಹಿಂದೆ 2 ಡೋಸ್‌ಗಳಾಗಿ ಭಿನ್ನ ಲಸಿಕೆ ನೀಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಗೊತ್ತಾಗಿತ್ತು.
ಪರಿಣಾಮ ಏನು?:
ವೈರಸ್‌ಗಳ ಸಮ್ಮಿಳನದಿಂದ ಪ್ರತಿಕಾಯಗಳ ಸೃಷ್ಟಿ ಪರಿಣಾಮಕಾರಿಯಾಗಿರುತ್ತದೆ. ಇದು ಸುರಕ್ಷಿತವಾಗಿದೆ. ವಿಭಿನ್ನ ಲಸಿಕೆ ಪಡೆದುಕೊಂಡ ಬಳಿಕ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ.