Advertisement

ಗೂಗಲ್ ಪ್ಲೇಸ್ಟೋರ್ ಗೆ ಮತ್ತೆ ಮರಳಿದ ‘ದೇಸಿ ಟಿಕ್ ಟಾಕ್’ ಮಿತ್ರೊನ್ ಆ್ಯಪ್

01:09 PM Jun 06, 2020 | Mithun PG |

ನವದೆಹಲಿ: ರಿಮೂವ್ ಆಗಿದ್ದ ದೇಸಿ ಟಿಕ್ ಟ್ಯಾಕ್ ಎಂದೇ ಖ್ಯಾತವಾಗಿದ್ದ ಮಿತ್ರೊನ್ ಆ್ಯಪ್ ಇದೀಗ ಮತ್ತೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಕೆಲ ದಿನಗಳ ಹಿಂದೆ ಗೂಗಲ್ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಮಿತ್ರೊನ್ ಪ್ಲೇ ಸ್ಟೋರ್ ನಿಂದ ಕಣ್ಮರೆಯಾಗಿತ್ತು.

Advertisement

ಈ ಬಗ್ಗೆ ಸ್ಪಷ್ಟನೆ ನೀಡಿದ ಗೂಗಲ್ ‘ಕೆಲ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದಕ್ಕಾಗಿ ಈ ಅಪ್ಲಿಕೇಶನ್ ಅನ್ನು ರಿಮೂವ್ ಮಾಡಲಾಗಿತ್ತು. ಇದೀಗ ಡೆವಲಪರ್ ಜೊತೆಗೆ ಮಾತುಕತೆಯಾಗಿ ಸಮಸ್ಯೆ ಬಗೆಹರಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಪ್ಲೇ ಸ್ಟೋರ್ ನಿಂದ ರಿಮೂವ್ ಆಗುವ ಮೊದಲು ಮಿತ್ರೊನ್ ಆ್ಯಪ್ 50 ಲಕ್ಷಕ್ಕಿಂತ ಹೆಚ್ಚು ಡೌನ್ ಲೋಡ್ ಗಳನ್ನು ಕಂಡಿತ್ತು.  ಮಾತ್ರವಲ್ಲದೆ ಚೈನಾ ಮೂಲದ ಟಿಕ್ ಟಾಕ್ ನ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿತ್ತು.  ಮಿತ್ರೋನ್ ಆ್ಯಪ್ ಫೀಚರ್ ಗಳು ಟಿಕ್ ಟಾಕ್ ನ ಯಥಾವತ್ತಾಗಿದ್ದವು.

ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ಮಿತ್ರೊನ್ ಆ್ಯಪ್ ನ ಸ್ಥಾಪಕ. ಗಮನಾರ್ಹ ಸಂಗತಿಯೆಂದರೇ ಮಿತ್ರೋನ್ ಆ್ಯಪ್‌ಗೆ ಪಾಕಿಸ್ತಾನ ಮೂಲದ ಡೆವಲಪರ್‌ ರಚಿಸಿದ್ದ ಕೋಡಿಂಗ್ ಬಳಸಲಾಗಿತ್ತು ಎಂದು ವರದಿಯಾಗಿತ್ತು. ಪಾಕಿಸ್ತಾನದಲ್ಲಿ ರಚಿಸಿದ್ದ ಟಿಕ್‌ ಟಿಕ್‌ ಎನ್ನುವ ಆ್ಯಪ್ ಕೋಡಿಂಗ್ ಅನ್ನು ಖರೀದಿಸಿದ್ದ ಮಿತ್ರೊನ್ ಡೆವಲಪರ್ಸ್, ಅದರ ಯಥಾವತ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿಯೇ ಕೆಲ ದಿನಗಳ ಹಿಂದೆ ಪ್ಲೇ ಸ್ಟೋರ್ ನಿಂದ ಮಿತ್ರೊನ್ ಆ‍್ಯಪ್ ಅನ್ನು ರಿಮೂವ್ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next