Advertisement

‘Mitra Shakti’: ಭಾರತ-ಶ್ರೀಲಂಕಾ ಜಂಟಿ ಸೇನಾ ಸಮರಾಭ್ಯಾಸ ಆರಂಭ

10:12 PM Aug 12, 2024 | Team Udayavani |

ಹೊಸದಿಲ್ಲಿ: ಪರಸ್ಪರ ಕಾರ್ಯಸಾಧ್ಯತೆ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂತೆ ಭಾರತ ಮತ್ತು ಶ್ರೀಲಂಕಾದ ಮಿಲಿಟರಿ ನಡುವಿನ ಜಂಟಿ ಸಮರಾಭ್ಯಾಸಕ್ಕೆ ಸೋಮವಾರ ದ್ವೀಪ ರಾಷ್ಟ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ರಕ್ಷಣ ಸಚಿವಾಲಯ ತಿಳಿಸಿದೆ.

Advertisement

ಭಾರತ-ಶ್ರೀಲಂಕಾ ಜಂಟಿ ಮಿಲಿಟರಿ ವ್ಯಾಯಾಮದ 10 ನೇ ಆವೃತ್ತಿ ‘ಮಿತ್ರ ಶಕ್ತಿ’, ಮಧುರು ಓಯಾ, ಸೇನಾ ತರಬೇತಿ ಶಾಲೆಯಲ್ಲಿ ಆಗಸ್ಟ್ 12 ರಿಂದ 25 ರವರೆಗೆ ನಡೆಯಲಿದೆ. ವಿಶ್ವಸಂಸ್ಥೆಯ ಆದೇಶದ ಅಧ್ಯಾಯ VII ಅಡಿಯಲ್ಲಿ ಉಪ-ಸಾಂಪ್ರದಾಯಿಕ ಸನ್ನಿವೇಶದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಇದು ಜಂಟಿ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ರಕ್ಷಣ ಸಚಿವಾಲಯ ಹೇಳಿದೆ.

ಜಂಟಿ ಸಮರಾಭ್ಯಾಸ ‘ಮಿತ್ರ ಶಕ್ತಿ’ ಭಾರತ ಮತ್ತು ಶ್ರೀಲಂಕಾದಲ್ಲಿ ಪರ್ಯಾಯವಾಗಿ ನಡೆಸುವ ವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಇದರ ಕೊನೆಯ ಆವೃತ್ತಿಯನ್ನು ನವೆಂಬರ್ 2023 ರಲ್ಲಿ ಪುಣೆಯಲ್ಲಿ ನಡೆಸಲಾಗಿತ್ತು.

106 ಸೇನಾ ಸಿಬಂದಿಯನ್ನು ಒಳಗೊಂಡಿರುವ ಭಾರತೀಯ ತುಕಡಿಯನ್ನು ರಜಪೂತಾನ ರೈಫಲ್ಸ್‌ನ ಬೆಟಾಲಿಯನ್ ಮತ್ತು ಇತರ ಶಸ್ತ್ರಾಸ್ತ್ರ ಪಡೆಗಲು ಪ್ರತಿನಿಧಿಸುತ್ತಿದ್ದು, ಶ್ರೀಲಂಕಾ ತುಕಡಿಯನ್ನು ಸೇನೆಯ ಗಜಬಾ ರೆಜಿಮೆಂಟ್‌ನ ಸಿಬಂದಿ ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next