ಮೂಡುಬಿದಿರೆ: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಬುಧವಾರ ದಿನವಿಡೀ ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ವಿವಿಧೆಡೆ ಭೇಟಿ
ಬುಧವಾರ ಬೆಳಗ್ಗೆ 7.25ಕ್ಕೆ ಮಾಜಿ ಸಚಿವ, ಜೆಡಿಎಸ್ ನಾಯಕ ಕೆ. ಅಮರನಾಥ ಶೆಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರೊಂದಿಗೆ ಮೂಡುಬಿದಿರೆ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮಿಥುನ್ ರೈ, ಬಳಿಕ ಮೂಡುಬಿದಿರೆ ಚೌಟರ ಅರಮನೆಗೆ ಭೇಟಿ ನೀಡಿದರು. 8 ಗಂಟೆಗೆ ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಚರ್ಚ್ ಹಾಗೂ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಬಳಿಕ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್‌ಗೆ ಭೇಟಿ ನೀಡಿದ ಅವರು ಅಲ್ಲಿಂದ ಇರುವೈಲು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 9 ಗಂಟೆಗೆ ಜೈನ ಮಠಕ್ಕೆ ಆಗಮಿಸಿದ ಅವರು ಅಲ್ಲಿಂದ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನ, ಅಲಂಗಾರು ಚರ್ಚ್, ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಸಂದರ್ಶಿಸಿ, ಪ್ರಸಾದ ಸ್ವೀಕರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರತ್ನಾ ಕರ ಸಿ. ಮೊಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖರು, ಪುರ ಸಭಾ ಸದಸ್ಯರು ಮಿಥುನ್ ರೈ ಅವ ರೊಂದಿಗೆ ರೋಡ್‌ಶೋ, ಸಭೆಯಲ್ಲಿ ಭಾಗವಹಿಸಿದ್ದರು.
ರೋಡ್ ಶೋ
ಬೆಳುವಾಯಿಯಲ್ಲಿ 10 ಗಂಟೆಗೆ ರೋಡ್ ಶೋ ಪ್ರಾರಂಭವಾಗಿ ಬಳಿಕ ಅಳಿಯೂರು ಮಾರ್ಗವಾಗಿ ಶಿರ್ತಾಡಿ ಪೇಟೆಯಲ್ಲಿ ರೋಡ್ ಶೋ ನಡೆಸಿ ಚರ್ಚ್, ಮಸೀದಿಗೆ ಭೇಟಿ ನೀಡಿ, ಮಧ್ಯಾಹ್ನ ಮೂಡುಬಿದಿರೆ ಮಸೀದಿ ಸಂದ ರ್ಶಿ ಸಿದ ಬಳಿಕ ಕೇಮಾರು ಮಠ, ಪಾಲಡ್ಕ ಚರ್ಚ್, ಬನ್ನಡ್ಕದ ಎಸ್‌ಕೆಎಫ್ ಕೈಗಾರಿ ಕಾವರಣಕ್ಕೆ ಭೇಟಿ ನೀಡಿ ದರು. ಸಂಜೆ 4 ಗಂಟೆಗೆ ಅಲಂಗಾರಿನಿಂದ ಮೂಡುಬಿದಿರೆ ಪೇಟೆ ವರೆಗೆ ರೋಡ್ ಶೋ ನಡೆಸಿದರು. ಬಳಿಕ ಸಂಜೆ 5ರ ವೇಳೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಪಾಲ್ಗೊಂಡರು.