Advertisement

Bollywood: ಎದೆನೋವು ಹಿನ್ನೆಲೆ ಹಿರಿಯ ನಟ ಮಿಥುನ್‌ ಚಕ್ರವರ್ತಿ ಆಸ್ಪತ್ರೆಗೆ ದಾಖಲು

03:51 PM Feb 10, 2024 | Team Udayavani |

ಕೋಲ್ಕತ್ತಾ: ಬಾಲಿವುಡ್‌ ಹಿರಿಯ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಶನಿವಾರ ಮುಂಜಾನೆ(ಫೆ.10 ರಂದು) ಮಿಥುನ್ ಚಕ್ರವರ್ತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದರಿಂದ ಎದೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.

ಆದರೆ ಮಿಥುನ್‌ ಚಕ್ರವರ್ತಿ ಬಗ್ಗೆ ವರದಿಗಳು ಬರುತ್ತಿದ್ದಂತೆ ಅವರ ಕುಟುಂಬಸ್ಥರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  ದಿನನಿತ್ಯದ ತಪಾಸಣೆಗೆ ಮಾತ್ರ ಅವರು  ಆಸ್ಪತ್ರೆಗೆ ಹೋಗಿದ್ದು, ಅವರಿಗೆ ಎದೆನೋವು ಕಾಣಿಸಿಕೊಂಡಿಲ್ಲ.ಅವರು ಚೆನ್ನಾಗಿದ್ದಾರೆ ಎಂದು ಸೊಸೆ ಮದಾಲ್ಸಾ ಶರ್ಮಾ ಹೇಳಿದ್ದಾರೆ.

ಚಿತ್ರರಂಗದಲ್ಲಿ ಅಪಾರ ಸಾಧನೆಗೈದ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next