Advertisement
ಇಂಗ್ಲೆಂಡ್ ಸರಣಿಯ ನಂತರ ಮಾತನಾಡಿದ ಮಿಥಾಲಿ, ನ್ಯೂಜಿಲ್ಯಾಂಡ್ ಸರಣಿಯಲ್ಲಿ ನಮಗೆ ಡಿಆರ್‌ಎಸ್ ಬಳಸುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಈ ಅವಕಾಶ ಇರಲಿಲ್ಲ. ಹೀಗಾದಲ್ಲಿ ನಮ್ಮ ಆಟಗಾರರಿಗೆ ಡಿಆರ್ ಎಸ್ ಬಳಸುವ ಬಗ್ಗೆ ಗೊಂದಲ ಉಂಟಾಗುತ್ತದೆ. ಡಿಆರ್ ಎಸ್ ಪದ್ದತಿ ತನ್ನದೇ ಆದ ಪರಿಣಾಮಗಳನ್ನು ಹೊಂದಿದೆ. ಹಾಗಾಗಿ ನಿರಂತರ ಬಳಕೆಯಿಂದ ಈ ಅನುಕೂಲವನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕೆಂದು ತಿಳಿಯಲು ವನಿತಾ ಆಟಗಾರ್ತಿಯರಿಗೆ ಸುಲಭವಾಗುತ್ತದೆ ಎಂದರು.2017ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ವನಿತಾ ಕ್ರಿಕೆಟ್ ಗೆ ಡಿಆರ್ ಎಸ್ ಅನ್ವಯವಾದಾಗ ಪ್ರಥಮವಾಗಿ ಉಪಯೋಗಿಸಿದ ನಾಯಕಿ ಎಂಬ ಹೆಗ್ಗಳಿಕೆ ಮಿಥಾಲಿ ರಾಜ್ ರದ್ದು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದ ಬಗ್ಗೆ ಮಾತನಾಡಿದ ಮಿಥಾಲಿ, ಸರಣಿ ಗೆದ್ದ ಬಗ್ಗೆ ಹೆಮ್ಮೆ ಇದೆ. ಆದರೆ ನಾವು ಎಲ್ಲಾ ವಿಭಾಗಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು.