Advertisement

ಸ್ಟಾರ್ಕ್‌ಗೆ ಗಾಯ, ಐಪಿಎಲ್‌ನಿಂದ ಔಟ್‌

07:00 AM Mar 31, 2018 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯ ತಂಡದ ವೇಗಿ ಮಿಚೆಲ್‌ ಸ್ಟಾರ್ಕ್‌ ಬಲಗಾಲಿನ ಮೂಳೆಗೆ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟೆಸ್ಟ್‌ಗೆ ಮತ್ತು ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಿಂದ ಹೊರಬಿದ್ದಿದ್ದಾರೆ. ಇದರಿಂದ ಕೋಲ್ಕತ್ತಾ ನೈಟ್‌ ರೈಡರ್ (ಕೆಕೆಆರ್‌) ಫ್ರಾಂಚೈಸಿಗೆ ದೊಡ್ಡ ಆಘಾತ ಎದುರಾಗಿದೆ.

Advertisement

ಗಾಯ ಗಂಭೀರ ಪರಿಣಾಮವಾಗಿರುವುದರಿಂದ ಸ್ಟಾರ್ಕ್‌ ಐಪಿಎಲ್‌ ಆಡುವ ಸಾಧ್ಯತೆ ಇಲ್ಲ. ಆದರೆ, ಈ ಬಗ್ಗೆ ಕೆಕೆಆರ್‌ ಫ್ರಾಂಚೈಸಿ ಯಾವುದೇ ವಿಷಯವನ್ನು ಹೊರಹಾಕಿಲ್ಲ. ತಾರಾ ಬೌಲರ್‌ ಆಗಿರುವ ಸ್ಟಾರ್ಕ್‌ ಅವರನ್ನು ಈ ಬಾರಿಯ ಹರಾಜಿನಲ್ಲಿ ಕೆಕೆಆರ್‌ ಫ್ರಾಂಚೈಸಿ 9.4 ಕೋಟಿ ರೂ.ಗೆ ಖರೀದಿಸಿತ್ತು. ಇಲ್ಲಿಯವರೆಗೆ ಸ್ಟಾರ್ಕ್‌ 27 ಐಪಿಎಲ್‌ ಪಂದ್ಯವನ್ನು ಆಡಿ 34 ವಿಕೆಟ್‌ ಕಬಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next