ದುಬೈ: ಈ ಬಾರಿಯ ಐಪಿಎಲ್ ಹರಾಜು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂಗೆ ಹೈದರಾಬಾದ್ ತಂಡದ ಪಾಲಾಗಿ ದಾಖಲೆ ಬರೆದರೆ, ಕೆಲವೇ ನಿಮಿಷಗಳಲ್ಲಿ ಮಿಚೆಲ್ ಸ್ಟಾರ್ಕ್ ಅವರು ಈ ದಾಖಲೆ ಮುರಿದಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24.75 ಕೋಟಿ ರೂ ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿ ಐಪಿಎಲ್ ದಾಖಲೆ ಬರೆದರು.
ಕಳೆದ ಸೀಸನ್ ನಲ್ಲಿ ಸ್ಯಾಮ್ ಕರ್ರನ್ ಅವರು 18 ಕೋಟಿ ರೂ ಪಡೆದು ದುಬಾರಿ ಆಟಗಾರನಾಗಿದ್ದರು. ಆದರೆ ಇಂದಿನ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರು 20.50 ಕೋಟಿ ರೂ ಪಡೆದಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಸ್ಟಾರ್ಕ್ ಈ ದಾಖಲೆ ಮುರಿದಿದ್ದಾರೆ.
ಹಲವು ವರ್ಷಗಳ ಬಳಿಕ ಐಪಿಎಲ್ ಆಡಳಿದ ಸ್ಟಾರ್ಕ್ ಗೆ ಆರಂಭದಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳು ಬಿಡ್ಡಿಂಗ್ ನಡೆಸಿದವು. ಬಳಿಕ ಕೆಕೆಆರ್ ಮತ್ತು ಗುಜರಾತ್ ನಡುವೆ ಯುದ್ದವೇ ನಡೆಯಿತು. ಕೊನೆಗೆ 24.75 ಕೋಟಿ ರೂ ಗೆ ಕೆಕೆಆರ್ ಪಾಲಾದರು.