ಮಂಡ್ಯ: ಮೈಷುಗರ್ ಆರಂಭದ ವಿಚಾರದಲ್ಲಿ ಕೆಲವು ಸಂಘಟನೆಗಳ ಮುಖಂಡರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಆರೋಪಿಸಿದರು.
ರೈತ ಹಿತರಕ್ಷಣಾ ಸಮಿತಿಯ ಬಗ್ಗೆ ನಮಗೆ ಅಪಾರ ಗೌರವವಿದೆ. ಕೆಲವು ಸಂಘಟನೆಗಳ ಮುಖಂಡರು ತಮ್ಮ ಸ್ವ ಹಿತಾಸಕ್ತಿಗಾಗಿ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ. ಕೆಲವೇ ಸಂಘಟನೆಗಳ ಮುಖಂಡರು ಜಿಲ್ಲಾ ರೈತ ಹಿತರ ಕ್ಷಣಾ ಸಮಿತಿ ತಮ್ಮ ಆಸ್ತಿ ಎಂಬಂತೆ ಭಾವಿಸಿ ದ್ದಾರೆ. ತಮ್ಮ ಅಭಿಪ್ರಾಯವೇ ಜಿಲ್ಲೆಯ ರೈತರ ಅಭಿಪ್ರಾಯ ಎಂಬಂತೆ ಬಿಂಬಿಸಿ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಇಲ್ಲಸಲ್ಲದ ಆರೋಪ: ಸಕ್ಕರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರು ಮಂಗಳವಾರ ಕಾರ್ಖಾನೆ ಬಳಿಗೆ ಬಂದ ಸಮಯದಲ್ಲಿ ರೈತರು ತಮ್ಮ ಮನದಾಳದ ಮಾತುಗಳನ್ನು ತಿಳಿಸಿದರು. ಅಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಯಬೇಕೆಂದು ಘೋಷಣೆ ಕೂಗಿದ ಮುಖಂಡರ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ವಿಚಲಿತರಾದ ಸುನಂದಾ ಜಯರಾಂ ಅವರು ಸ್ವಹಿತಾಸಕ್ತಿ ಗಾಗಿ ಸಂಸದರ ವಿರುದಟಛಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ದೂರವೇ ಉಳಿದಿದ್ದಾರೆ. ಮೊದಲು ಸಮಿತಿ ಯನ್ನು ಪುನಾರಚನೆ ಮಾಡಿಕೊಂಡು ನಂತರ ಹೋರಾಟಕ್ಕೆ ಮುಂದಾಗಲಿ ಎಂದು ಅವರು ಸಲಹೆ ನೀಡಿದರು.
ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ: ಜಿಲ್ಲಾ ಸ್ವಾಭಿಮಾನಿ ಪಡೆದ ಅಧ್ಯಕ್ಷ ಎಚ್.ಪಿ.ಶಶಿಕುಮಾರ್ ಮಾತನಾಡಿ, ಸಂಸದೆ ಸುಮಲತಾ ಅವರು ಸುನಂದಾ ಜಯರಾಂ ಅವರಿಂದ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ. ಆ ನೈತಿ ಕತೆಯೂ ಅವರಿಗಿಲ್ಲ. ಜಿಲ್ಲೆಯ ರೈತರ ಅಭಿಪ್ರಾಯವೇ ನಿಜವಾದ ಸ್ವಾಭಿಮಾನ. ಇದನ್ನು ಸುನಂದಾ ಜಯರಾಂ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.
ಪಕ್ಷದ ವಕ್ತಾರರಂತೆ ವರ್ತನೆ: ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಡೆದ ಸಭೆಯಲ್ಲಿ 69 ಕೋಟಿ ರೂ. ಹಣ ನಿಗದಿಪಡಿಸಿ ಕಾರ್ಖಾನೆ ಯನ್ನು ಒ ಅಂಡ್ ಎಂಗೆ ಕೊಟ್ಟು, ವಿಆರ್ ಎಸ್ ಹಣ ಪಾವತಿಸುವುದಕ್ಕೆ ನಿರ್ಧರಿಸಿತ್ತು. ಇದಕ್ಕೆ ಸುನಂದಾ ಜಯರಾಂ ಕೂಡ ಸಹಮತ ವ್ಯಕ್ತಪಡಿಸಿದ್ದರು.
ಅಂದು ಒ ಅಂಡ್ ಎಂ ಬೆಂಬಲಿ ಸಿದ್ದವರು ಇಂದು ವಿರೋಧಿಸುತ್ತಿರುವುದೇಕೆ. ಇವರು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ಜಿ.ಮಾದೇಗೌಡರಿಗೆ ವಯಸ್ಸಾಗಿದ್ದು, ಅವರಿಗೆ ನೆನಪಿನ ಶಕ್ತಿಯೂ ಕಡಿಮೆ ಇದೆ. ಅವರನ್ನು ಮುಂದಿಟ್ಟುಕೊಂಡು ಸಮಿತಿಯ ಅಭಿಪ್ರಾಯ ಎಂದು ಹೇಳುವುದು ಸರಿಯಲ್ಲ ಎಂದರು.