Advertisement

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

07:36 PM Aug 08, 2022 | Team Udayavani |

ಸಾಗರ: ಹರ್ ಘರ್ ತಿರಂಗ್ ಕಾರ‍್ಯಕ್ರಮಕ್ಕಾಗಿ ಸಾವಿರಕ್ಕೂ ರಾಷ್ಟ್ರಧ್ವಜ ಸಿದ್ಧತೆ ಕಾರ‍್ಯ ನಡೆಯುತ್ತಿರುವ ಸಂದರ್ಭದಲ್ಲಿ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ಕಚೇರಿಗೆ ರವಾನೆಯಾದ ಧ್ವಜವೊಂದರಲ್ಲಿನ ಅಶೋಕ ಚಕ್ರದ ಸಂಕೇತ ನಿರ್ದಿಷ್ಟ ಸ್ಥಳದಲ್ಲಿ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

ಮನೆ ಮನೆಗೆ ರಾಷ್ಟ್ರಧ್ವಜ ಹಂಚುವ ಕಾರ‍್ಯಕ್ರಮಕ್ಕೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಚಾಲನೆ ನೀಡಿದ ಜನಪ್ರತಿನಿಧಿಗಳು ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸುತ್ತಿರುವ  ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೇಳೆ ಈ ದೋಷವನ್ನು ಗುರುತಿಸಲಾಗಿದೆ. ಧ್ವಜದ ಬಿಳಿ ಬಣ್ಣದ ಸ್ಥಳದ ಮಧ್ಯದಲ್ಲಿರಬೇಕಾದ ಅಶೋಕ ಚಕ್ರ ಪಕ್ಕದಲ್ಲಿದೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಅರಳಗೋಡು ಗ್ರಾಪಂ ಅಧ್ಯಕ್ಷ ಮೇಘರಾಜ್ ಅರೋಡಿ ಮಾತನಾಡಿ, ಧ್ವಜ ಸಂಬಂಧ ನಿರ್ದಿಷ್ಟ ನಿಯಮಗಳಿರುವ ಹಿನ್ನೆಲೆಯಲ್ಲಿ ದೋಷಪೂರಿತ ಧ್ವಜಗಳ ಬಳಕೆಯಾಗದಂತೆ ಕಟ್ಟೆಚ್ಚರ ಅಗತ್ಯ. ದೋಷಗಳಿರುವ ರಾಷ್ಟ್ರಧ್ವಜ ಬಳಕೆಯಾಗದಂತೆ ನಿಗಾ ವಹಿಸಲಾಗಿದೆ. ಸಿದ್ಧಪಡಿಸಲಾದ ಬಾವುಟಗಳಲ್ಲಿ ದೋಷಗಳಿರದಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ ಸಹ ಗ್ರಾಪಂ ಕಚೇರಿಯಲ್ಲಿ ಧ್ವಜಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಕೆಲವು ದಿನಗಳ ಹಿಂದೆ ನಗರಸಭೆ ಆವರಣದಲ್ಲಿ ಧ್ವಜಗಳ ಸಿದ್ಧತೆ ನಡೆಯುತ್ತಿರುವ ಸ್ಥಳದಲ್ಲಿ ಸಹ ಒಂದು ಬಾವುಟದಲ್ಲಿ ಬಣ್ಣಗಳ ಅನುಕ್ರಮಣಿಕೆ ಬದಲಾಗಿರುವುದನ್ನು ತಕ್ಷಣ ಗಮನಿಸಿ, ಬದಲಾಯಿಸಲಾಗಿದೆ. ಸಿದ್ಧಗೊಂಡ ಬಾವುಟವನ್ನು ಕೋಲಿಗೆ ಅಳವಡಿಸುವಾಗ ಹಸಿರು ಬಣ್ಣ ಮೇಲು ತುದಿಯಲ್ಲಿತ್ತು. ಇದನ್ನು ಗಮನಿಸಿದ ಹಿರಿಯರೊಬ್ಬರು ತಕ್ಷಣ ಸಂಬಂಧಪಟ್ಟ ಪ್ರಮುಖರಿಗೆ ತಿಳಿಸಿದ್ದು, ದೋಷ ಕಂಡು ಬಂದ ಬಾವುಟವನ್ನು ಬದಿಗಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next