Advertisement

ಸೋಂಕು ತಡೆಗೆ “ಮಿಷನ್‌ ಝೀರೋ’ಯೋಜನೆ

12:02 PM Jun 24, 2020 | Suhan S |

ಮುಂಬಯಿ, ಜೂ. 23: ಅತಿ ಹೆಚ್ಚು ಕೋವಿಡ್ ಭಾದಿತ ಉಪ ನಗರಗಳಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಮುಂಬಯಿ ಮಹಾನಗರ ಪಾಲಿಕೆ ಸೋಮವಾರ ಶಹಾಜಿರಾಜೇ ಭೋಸ್ಲೆ ಕ್ರೀಡಾ ಸಂಕೀರ್ಣದಲ್ಲಿ “ಮಿಷನ್‌ ಝೀರೋ’ ಕ್ಷಿಪ್ರ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ.

Advertisement

ಈ ಯೋಜನೆಯಡಿಯಲ್ಲಿ 50 ಮೊಬೈಲ್‌ ಡಿಸ್ಪೆನ್ಸರಿ ವ್ಯಾನ್‌ಗಳು ಮುಂಬಯಿಯ ವಿವಿಧ ಭಾಗಗಳನ್ನು 2-3 ವಾರಗಳವರೆಗೆ ರೋಗಿಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಿವೆ. ಈ ಮೊಬೈಲ್‌ ಔಷಧಾಲಯ ವ್ಯಾನ್‌ಗಳು ಈಗ ಮುಲುಂಡ್‌, ಭಾಂಡೂಪ್‌, ಅಂಧೇರಿ, ಮಲಾಡ್‌, ಬೊರಿವಲಿ, ದಹಿಸರ್‌, ಕಾಂದಿವಲಿ ಪ್ರದೇಶಗಳಿಗೆ 2-3 ವಾರಗಳವರೆಗೆ ಭೇಟಿ ನೀಡಿ ರೋಗಿಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಿವೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. .

ಶೀಘ್ರ ಚೇಸ್‌ ವೈರಸ್‌ ಯೋಜನೆ ಜಾರಿ: ಆದಿತ್ಯ ಠಾಕ್ರೆ ರಾಜ್ಯದ ಅತ್ಯಂತ ಹಾನಿಗೊಳಗಾದ ಪ್ರದೇಶಗಳಿಗೆ ರಾಜ್ಯ ಪರಿಸರ ಸಚಿವ ಆದಿತ್ಯ ಠಾಕ್ರೆ ಚೇಸ್‌ ವೈರಸ್‌ ಹೊಸ ಉಪಕ್ರಮವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮುಲುಂಡ್‌, ಅಂಧೇರಿ, ಮಲಾಡ್‌, ಬೊರಿವಲಿ, ದಹಿಸರ್‌, ಕಾಂದಿವಲಿಯಲ್ಲಿ ಚೇಸ್‌ ದಿ ವೈರಸ್‌ ಡ್ರೈವ್‌ ಅನ್ನು ಬಿಎಂಸಿ ಪ್ರಾರಂಭಿಸುತ್ತಿದೆ. ಮೇಯರ್‌ ಪೆಡ್ನೆಕರ್‌, ಎಂಸಿ ಚಾಹಲ್‌ ಮತ್ತು ಉಸ್ತುವಾರಿ ಮಂತ್ರಿಯಾದ ಅಸ್ಲಾಮ್‌ ಶೇಖ್‌ ಅವರಿಗೆ ನಾನು ಸಹಕರಿಸಲಿದ್ದೇನೆ. ಈ ಪ್ರದೇಶಗಳಲ್ಲಿ ಕೋವಿಡ್ ತಡೆಗಟ್ಟುವಲ್ಲಿ ಎಲ್ಲ ರೀತಿಯ ಸಹಕಾರ ದೊರೆಯಲಿದೆ ಎಂದು ಠಾಕ್ರೆ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next