Advertisement

ಮಿಶನ್‌ ಶಕ್ತಿ: ಕಸ ನಾಶ

12:32 AM May 12, 2019 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಭಾರತವು ಪರೀಕ್ಷಿಸಿದ ಉಪಗ್ರಹ ನಿರೋಧಕ ಕ್ಷಿಪಣಿ ಉಡಾವಣೆಯಿಂದ ಉಂಟಾದ ಬಹುತೇಕ ತ್ಯಾಜ್ಯವು ಬಾಹ್ಯಾಕಾಶದಿಂದ ನಾಶವಾಗಿವೆ. ಇನ್ನುಳಿದ ಕೆಲವು ತ್ಯಾಜ್ಯ ಶೀಘ್ರ ನಾಶವಾಗಲಿವೆ ಎಂದು ಡಿಆರ್‌ಡಿಒ ಮುಖ್ಯಸ್ಥ ಜಿ ಸತೀಶ್‌ ರೆಡ್ಡಿ ಹೇಳಿದ್ದಾರೆ. ಏ.6 ರಂದು ನಾವು ಈ ಬಗ್ಗೆ ವಿವರಿಸಿದ್ದೆವು. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಹುತೇಕ ಕಸವು ನಾಶವಾಗಿವೆ. ಇನ್ನು ಕೆಲವೇ ತುಂಡುಗಳು ಉಳಿದುಕೊಂಡಿವೆ. ಇವು ಕೆಲವೇ ವಾರಗಳಲ್ಲಿ ನಾಶವಾಗಲಿವೆ ಎಂದು ಹೇಳಿದ್ದಾರೆ. ತ್ಯಾಜ್ಯದ ಸಮಸ್ಯೆ ನಿವಾರಿಸುವುದಕ್ಕಾಗಿಯೇ 300 ಕಿ.ಮೀ ವ್ಯಾಪ್ತಿಯಲ್ಲಿ ಮಿಶನ್‌ ಶಕ್ತಿಯನ್ನು ಮಾ.27 ರಂದು ಜಾರಿಗೊಳಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next