Advertisement

ಕುಂಬಳೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ತಮಿಳುನಾಡಿನಲ್ಲಿ ಪತ್ತೆ

08:07 PM Sep 15, 2022 | Team Udayavani |

ಕುಂಬಳೆ: ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಲೆಯೊಂದರ 8 ನೇ ತರಗತಿ ವಿದ್ಯಾರ್ಥಿ ಸೆ.14 ರಂದು ಬೆಳಗ್ಗೆ ನಾಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ.

Advertisement

ಸೆ.14 ರಂದು ಬೆಳಗ್ಗೆ ಸಹಪಾಠಿಗಳೊಂದಿಗೆ ಶಾಲಾ ಮೈದಾನದವರೆಗೆ ತಲುಪಿದ ಬಾಲಕ ತರಗತಿಗೆ ಹಾಜರಾಗಿರಲಿಲ್ಲ. ಇದರಿಂದ ಅಧ್ಯಾಪಕರು ನೀಡಿದ ಮಾಹಿತಿಯ ಮೇರೆಗೆ ಬಾಲಕನ ತಂದೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು.

ಸೈಬರ್‌ ಸೆಲ್‌ ಮೂಲಕ ತನಿಖೆ ನಡೆಸಿದಾಗ ಬಾಲಕ ತಮಿಳುನಾಡಿನ ಮಧುರೈಯಲ್ಲಿರುವುದು ತಿಳಿದು ಬಂತು. ಅದರಂತೆ ಮಧುರೈ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅಲ್ಲಿನ ಪೊಲೀಸರು ಬಾಲಕನನ್ನು ಮಧುರೈ ರೈಲ್ವೇ ನಿಲ್ದಾಣದಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನನ್ನು ಕರೆದು ತರಲು ಪೊಲೀಸರು ಮತ್ತು ಮನೆಯವರು ಮಧುರೈಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next