Advertisement
ಪುಲಕೇಶಿನಗರದ ಶಕ್ತೀಶ್ವರಿ (15), ವೆರೋ ನಕಾ (16) ಹಾಗೂ ನಂದಿನಿ (15) ಪತ್ತೆಯಾದ ಬಾಲಕಿಯರು.
Related Articles
Advertisement
ಸಲಿಂಗ ಮದುವೆಗೆ ಬಾಲಕಿಯರ ಸಿದ್ಧತೆ? : ಮೂವರು ಬಾಲಕಿಯರ ಪೈಕಿ ಇಬ್ಬರು ಪ್ರೀತಿಸಿ ಸಲಿಂಗ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಮೂವರು ಬಾಲಕಿಯರ ಪೈಕಿ ಇಬ್ಬರು ಹಾಸ್ಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೋರ್ವ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದರು. ಹಾಸ್ಟೆಲ್‌ನಲ್ಲಿದ್ದ ಇಬ್ಬರು ಬಾಲಕಿಯರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸೆ.6ರಂದು ಮಧ್ಯಾಹ್ನ ಹಾಸ್ಟೆಲ್ ವಾರ್ಡನ್ ಹಾಗೂ ಸೆಕ್ಯೂರಿಟಿ ಕಣ್ತಪ್ಪಿಸಿ ಶಾಲೆಯಿಂದ ಹೋಗಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿಯೂ ಇವರ ಜತೆ ಬಂದಿದ್ದಳು. ಮನೆಯಲ್ಲಿ ಕಷ್ಟ ಇದೆ ಎಂದು ಹೇಳಿ ಸ್ನೇಹಿತೆಯರು ಹಾಗೂ ಪರಿಚಿತರಿಂದ ಖರ್ಚಿಗಾಗಿ 21 ಸಾವಿರ ರೂ. ಸಂಗ್ರಹಿಸಿದ್ದರು. ಈ ಹಣದಲ್ಲಿ ಬಟ್ಟೆ ಹಾಗೂ ಮೊಬೈಲ್ ಖರೀದಿಸಿ ಕಂಟ್ಮೋನೆಂಟ್ ರೈಲು ನಿಲ್ದಾಣಕ್ಕೆ ಬಂದಿದ್ದರು. ಬಾಲಕಿಯ ಪಾಲಕರು ಕೋರ್ಟ್‌ಗೆ ಹೇಬಿಯಸ್ ಅರ್ಜಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ಮುಗಿಸಿ ಮಂಗಳವಾರ ಮೂವರನ್ನು ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪತ್ತೆ ಹಚ್ಚಿದ್ದು ಹೇಗೆ? : ಇತ್ತ ಬಾಲಕಿಯರು ನಾಪತ್ತೆಯಾಗಿರುವ ಬಗ್ಗೆ ಅವರ ಪಾಲಕರು ಪುಲಕೇಶಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್, ಮಹಾರಾಷ್ಟ್ರ, ಪುದುಚೆರಿ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಬಾಲಕಿಯರ ಶೋಧ ನಡೆಸಿದ್ದರು. ಕೆಲ ದಿನಗಳ ಹಿಂದೆ ಮೂವರು ಬಾಲಕಿಯರ ಪೈಕಿ ಶಕ್ತೀಶ್ವರಿಗೆ ತಂದೆಯ ನೆನಪಾಗಿ, ತಾನು ಕೆಲಸ ಮಾಡುತ್ತಿದ್ದ ಲ್ಯಾಂಡ್‌ಲೈನ್ ಫೋನ್‌ನಿಂದ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದಳು. ಇತ್ತ ಆಕೆಯ ತಂದೆ ಕರೆ ಸ್ವೀಕರಿಸು ತ್ತಿದ್ದಂತೆ ಹಲೋ ಎಂದು ಹೇಳಿ ಕರೆ ಕಡಿತಗೊಳಿಸಿದ್ದಳು. ಇದು ತನ್ನ ಮಗಳದ್ದೇ ಧ್ವನಿ ಎಂಬುದು ಆಕೆಯ ತಂದೆಗೆ ದೃಢಪಟ್ಟಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶಕ್ತೀಶ್ವರಿ ಕರೆ ಮಾಡಿದ್ದ ಲ್ಯಾಂಡ್‌ಲೈನ್ ನಂಬರ್‌ನ ಜಾಡು ಹಿಡಿದಾಗ ಅದು ಚೆನ್ನೈನ ಗಾರ್ಮೆಂಟ್ಸ್ ವೊಂದರ ನಂಬರ್ ಎಂಬುದು ಗೊತ್ತಾಗಿತ್ತು. ಇತ್ತ ಪೊಲೀಸರು ಚೆನ್ನೈಗೆ ಹೋಗಿ ಮೂವರು ಬಾಲಕಿಯರನ್ನೂ ಪತ್ತೆ ಹಚ್ಚಿ ನಗರಕ್ಕೆ ಕರೆ ತಂದು ಪಾಲಕರ ಮಡಿಲು ಸೇರುವಂತೆ ಮಾಡಿದ್ದಾರೆ.