Advertisement

Actor: 5 ತಿಂಗಳ ಹಿಂದೆ ಪರ್ವತದಲ್ಲಿ ನಾಪತ್ತೆಯಾಗಿದ್ದ ಖ್ಯಾತ ನಟ ಅಸ್ಥಿಪಂಜರವಾಗಿ ಪತ್ತೆ

09:51 AM Jun 28, 2023 | Suhan S |

ಲಾಸ್ ಏಂಜಲೀಸ್:  ಜೂ.25 ರಂದು ಮೌಂಟ್‌ ಬಾಲ್ಡಿ ಪರ್ವತದಲ್ಲಿ ಪತ್ತೆಯಾಗಿದ್ದ ಮಾನವ ಅವಶೇಷ ಜ.13 ರಂದು ಇದೇ ಪರ್ವತದಲ್ಲಿ ನಾಪತ್ತೆಯಾಗಿದ್ದ ಬ್ರಿಟಿಷ್‌ ನಟ ಜೂಲಿಯನ್ ಸ್ಯಾಂಡ್ಸ್ ಅವರ ದೇಹವೆಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.

Advertisement

ಪರ್ವತಾರೋಹಿಯೂ ಆಗಿದ್ದ ನಟ ಜೂಲಿಯನ್ ಒಂಟಿಯಾಗಿ ಇದೇ ವರ್ಷದ ಜನವರಿ 13 ರಂದು ದಕ್ಷಿಣ ಕ್ಯಾಲಿಫೋರ್ನಿಯಾದ ಮೌಂಟ್‌ ಬಾಲ್ಡಿ ಪರ್ವತಕ್ಕೆ ತೆರಳಿದ್ದರು.  ಈ ವೇಳೆ ಭೀಕರ ಚಳಿಗಾಲದ ಬಿರುಗಾಳಿಯೂ ಇತ್ತು. ಪರ್ವತದ ತುದಿಗೆ ಹೋಗಿದ್ದ ಅವರು ಆ ಬಳಿಕ ಕಾಣೆಯಾಗಿದ್ದರು.

ಭೀಕರ ಹಿಮವನ್ನು ಲೆಕ್ಕಿಸದೇ ಅವರ ಹುಡುಕಾಟಕ್ಕೆ ನಾನಾ ತಂಡಗಳು ಶ್ರಮವಹಿಸಿದ್ದವು. ಆದರೆ ಯಾವ ಪ್ರಯೋಜನವೂ ಆಗದೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಅವರ ಬಗ್ಗೆ ಸುಳಿವು ಕೂಡ ರಕ್ಷಣಾ ತಂಡಗಳಿಗೆ ಸಿಕ್ಕಿಲ್ಲ. ಎರಡು ವಾರ ಕಾರ್ಯಾಚರಣೆ ನಡೆಸಿದ ಬಳಿಕ ನಟನ ಸಹೋದರ  ನಿಕ್ “ಸ್ಯಾಂಡ್ಸ್ ಜೀವಂತವಾಗಿ ಬರುವುದಿಲ್ಲ” ಎಂದು ದುಃಖದಲ್ಲಿ ಹೇಳಿದ್ದರು.

ಜೂ.25 ರ ಮುಂಜಾನೆ ಕೆಲ ಪರ್ವತಾರೋಹಿಗಳ ಚಾರಣಕ್ಕೆ ಹೋಗಿದ್ದ ವೇಳೆ ಅವರಿಗೆ ಮಾನವ ಅವಶೇಷಗಳು ಪತ್ತೆಯಾಗಿದ್ದವು. ಇದನ್ನು ನೋಡಿ ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಆ ಬಳಿ ಅವಶೇಷವನ್ನು  ತನಿಖಾ ಕಚೇರಿಗೆ ರವಾನಿಸಲಾಗಿತ್ತು.

ಜೂನ್ 25, 2023 ರಂದು ಮೌಂಟ್ ಬಾಲ್ಡಿಯಲ್ಲಿ ಪತ್ತೆಯಾದ ದೇಹವನ್ನು ಗುರುತಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ. ಇದು ಉತ್ತರ ಹಾಲಿವುಡ್‌ನ 65 ವರ್ಷದ ಜೂಲಿಯನ್ ಸ್ಯಾಂಡ್ಸ್ ಅವರದು ಎಂದು ಸ್ಯಾನ್ ಬರ್ನಾರ್ಡಿನೊ ಶೆರಿಫ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಸಾವಿನ ವಿಧಾನ ಇನ್ನೂ ತನಿಖೆಯಲ್ಲಿದೆ, ಹೆಚ್ಚಿನ ಪರೀಕ್ಷಾ ಫಲಿತಾಂಶಗಳು ಬಾಕಿ ಉಳಿದಿವೆ ಎಂದು ಇಲಾಖೆ ಹೇಳಿದೆ.

1985 ರಲ್ಲಿ ಬಂದ “ಒಂದು ರೂಮ್ ವಿತ್ ಎ ವ್ಯೂ” ಸಿನಿಮಾದಲ್ಲಿನ ಪಾತ್ರದಿಂದ ಜನಪ್ರಿಯತೆಯನ್ನು ಪಡೆದುಕೊಂಡ ಜೂಲಿಯನ್ ಸ್ಯಾಂಡ್ಸ್, “ವಾರ್ಲಾಕ್” (1989), “ಅರಾಕ್ನೋಫೋಬಿಯಾ” (1990) “ಬಾಕ್ಸಿಂಗ್ ಹೆಲೆನಾ” (1993), “ವಾರ್ಲಾಕ್: ದಿ ಆರ್ಮಗೆಡ್ಡೋನ್” (1993), “ಯೇ ಬ್ಯಾಲೆಟ್”(2020), “ದಿ ಗೋಸ್ಟ್ಸ್ ಆಫ್ ಬೋರ್ಲಿ ರೆಕ್ಟರಿ” (2021) ಹಾಗೂ ಇನ್ನು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next