ಚೀನದಿಂದ ಪರಾರಿಯಾಗಿಲ್ಲ ಎಂದು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕಿ ಶಿ ಜೆಂಗ್ಲಿ ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ, ವೈರಸ್ ಉಗಮಕ್ಕೆ ಸಂಬಂಧಿಸಿದಂತೆ ಹಲವು ರಹಸ್ಯ ದಾಖಲೆಗಳನ್ನು ಪ್ಯಾರಿಸ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ತಲುಪಿಸಿರುವ ಅಂಶಗಳೂ ಸುಳ್ಳು ಎಂದಿದ್ದಾರೆ.
ಸರಕಾರಿ ಸ್ವಾಮ್ಯದ ‘ವಿ ಚಾಟ್’ ಸಾಮಾಜಿಕಜಾಲ ತಾಣದಲ್ಲಿ ಈ ಬಗ್ಗೆ ವಿವರಣೆ ನೀಡಿರುವ ಅವರು ‘ನಾನು ಮತ್ತು ನನ್ನ ಕುಟುಂಬ ಚೀನದಲ್ಲಿಯೇ ಇದೆ. ದೇಶದಿಂದ ಪರಾರಿಯಾಗುವುದಿಲ್ಲ ಮತ್ತು ಅದರ ಅಗತ್ಯವೂ ಇಲ್ಲವೆಂದಿದ್ದಾರೆ.
ಈ ಬಗೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೆ, ನಾವು ಯಾವುದೇ ತಪ್ಪು ಮಾಡಿಲ್ಲ. ಈಗ ಎಷ್ಟೇ ಕಷ್ಟವಾದರೂ ಸರಿ. ಮುಂದೊಂದು ದಿನ ಸತ್ಯ ಬಹಿರಂಗವಾಗುತ್ತದೆ’ ಎಂದು ತಿಳಿಸಿದ್ದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮಗಳು ಪ್ರಕಟಿಸಿವೆ.
“ಫೈವ್ ಐಸ್’ ಎಂಬ ಹೆಸರಿನಲ್ಲಿ ಐದು ರಾಷ್ಟ್ರಗಳು ಜತೆಗೂಡಿ ವೈರಸ್ ಮಾಹಿತಿಯನ್ನು ಚೀನ ಮುಚ್ಚಿಟ್ಟ ಬಗ್ಗೆ ವರದಿ ಬಹಿರಂಗಗೊಂಡ ಬೆನ್ನಲ್ಲೇ ಶಿ ಈ ಮಾಹಿತಿ ಅಪ್‌ಲೋಡ್ ಮಾಡಿದ್ದಾರೆ. ಬಾವಲಿಗಳು, ಅವುಗಳಿಗೆ ಸಂಬಂಧಿಸಿದ ವೈರಸ್‌ಗಳ ಬಗೆಗಿನ ಸಂಶೋಧನೆ ಬಗ್ಗೆ ಅಪಾರ ಉತ್ಸಾಹ ಹೊಂದಿದ್ದ ಅವರು, ‘ಬ್ಯಾಟ್ ವುಮನ್’ ಎಂದೇ ಪರಿಚಿತರಾಗಿದ್ದಾರೆ.
ಚೀನ ಸರಕಾರ ಅವರಿಗೆ ಮಾತನಾಡದಂತೆ ದಿಗ್ಬಂಧನ ಹೇರಿದೆ, ಅವರು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆ ಎಂಬುದೂ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹಲವು ವದಂತಿಗಳು ಹಬ್ಬಿವೆ.