Advertisement

Missing Case ಸುರತ್ಕಲ್‌; ನಾಲ್ವರು ವಿದ್ಯಾರ್ಥಿಗಳು ನಾಪತ್ತೆ

12:04 AM Feb 28, 2024 | Team Udayavani |

ಸುರತ್ಕಲ್‌: ಖಾಸಗಿ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ 1.30ಕ್ಕೆ ಶಾಲೆಯಿಂದ ಹೊರಗೆ ತೆರಳಿದ್ದು, ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.

Advertisement

ಹತ್ತನೇ ತರಗತಿಯ ಯಶ್ವಿ‌ತ್‌ ಚಂದ್ರಕಾಂತ್‌, ನಿರುಪ್‌,ಅನ್ವಿತ್‌ ಹಾಗೂ ರಾಘವೇಂದ್ರ ನಾಪತ್ತೆಯಾದವರು.

ಅವರು ಪ್ರಿಪರೇಟರಿ ಪರೀಕ್ಷೆ ಮುಗಿಸಿ ಹೊರಗೆ ತೆರಳಿದ್ದಾರೆ. ಸುರತ್ಕಲ್‌ ಪೊಲೀಸರು ಕೇಸು ದಾಖಲಿಸಿ ಸಿಸಿ ಟಿವಿ ಸಹಿತ ಪರಿಶೀಲನೆ ನಡೆಸಿದ್ದು, ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಿದ್ಯಾರ್ಥಿನಿಯ ಜತೆ ಅಸಭ್ಯ ವರ್ತನೆ: ಸೆರೆ
ಸುರತ್ಕಲ್‌: ಬಸ್‌ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿನಿ ಯೋರ್ವಳ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಕಾನ ಬಳಿಯ ವಸಂತ (54) ಎಂಬಾತನ ವಿರುದ್ಧ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next