ಮಂಗಳೂರು: ನಗರ ಸಶಸ್ತ್ರ ಮೀಸಲು ಪಡೆಯಲ್ಲಿ (ಸಿ.ಎ.ಆರ್.) ಹೆಡ್‌ಕಾನ್ ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ (35) ಅವರು ಒಂದು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಮೂಲತಃ ಮಂಜೇಶ್ವರದರಾದ ಅವರು ಕಳೆದ ಜೂ. 5 ರಂದು ಬೆಳಗ್ಗೆ ಸಿ.ಎ.ಆರ್. ಕರ್ತವ್ಯಕ್ಕಾಗಿ ಮಂಜೇಶ್ವರದ ಮನೆಯಿಂದ ಹೊರಟು ಬಂದಿದ್ದರು. ಆದರೆ ಮಂಗಳೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗದೆ ವಾಪಸ್ ಮನೆಗೂ ಹೋಗದೆ ಕಾಣೆಯಾಗಿದ್ದಾರೆ.
Advertisement
ವಿವಾಹಿತರಾಗಿದ್ದರೂ ಕೆಲವು ಸಮಯದಿಂದ ಪತಿ – ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೂ. 5ರಿಂದ ನಾಪತ್ತೆಯಾಗುವ ಕೆಲವು ದಿನಗಳ ಹಿಂದಿನಿಂದಲೇ ಮೋಹನ್ ಕುಮಾರ್ ಮಂಗಳೂರಿನಲ್ಲಿರುವ ಸಿ.ಎ.ಆರ್. ಕಚೇರಿಗೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು ಎಂದು ಮೂಲಗಳು ವಿವರಿಸಿವೆ. ಮನೆಯಲ್ಲಿ ತಾಯಿ ಮಾತ್ರ ಇದ್ದು, ಹಾಗಾಗಿ ಮಂಗಳೂರಿನಲ್ಲಿ ಕ್ವಾರ್ಟರ್ಸ್ ಇದ್ದರೂ ಬಹುತೇಕವಾಗಿ ಮಂಜೇಶ್ವರದ ಮನೆಗೆ ಹೋಗಿ ಬರುತ್ತಿದ್ದರು. 12 ವರ್ಷಗಳಿಂದ ಅವರು ಪೊಲೀಸ್ ಸೇವೆಯಲ್ಲಿದ್ದರು. ಅವರು 5.8 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರದವರಾಗಿದ್ದು, ಕನ್ನಡ, ತುಳು, ಮಲಯಾಳ ಭಾಷೆ ಮಾತನಾಡುತ್ತಾರೆ. ಪತ್ತೆಯಾದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
ಬಂಟ್ವಾಳ: ಪುದು ಗ್ರಾಮದ ಮಾರಿಪಳ್ಳ ನಿವಾಸಿ ಮಹಮ್ಮದ್ ಇಕ್ಬಾಲ್ ಅವರ ಪುತ್ರಿ ಮೆಹನಾಜ್ (30) ಆಕೆಯ ಪುತ್ರಿ ನೂರಜಾಹನ್ ನಿಧಾ(10) ಪುತ್ರ ಮಹಮ್ಮದ್ ಶಾಜಿ (6) ಜು. 2ರಂದು ಕಾಣೆಯಾಗಿದ್ದಾರೆ ಎಂದು ಮಹಿಳೆಯ ಸಹೋದರ ಅಬ್ದುಲ್ ಬಶೀರ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ತಂದೆ ಆನಾರೋಗ್ಯ ಹೊಂದಿದ್ದು ಅವರನ್ನು ಕಾಣಲೆಂದು ಜು. 1ರಂದು ಮಹಿಳೆಯು ಮಕ್ಕಳ ಸಹಿತ ಮಾರಿಪಳ್ಳಕ್ಕೆ ಬಂದಿದ್ದರು. ಜು. 2ರಂದು ಎಮ್ಮೆಕೆರೆಯಲ್ಲಿರುವ ಗಂಡ ಶಮೀರ್ ಮನೆಗೆ ತೆರಳುವುದಾಗಿ ಹೇಳಿ ಹೋದವರು ಕಾಣೆಯಾಗಿದ್ದರು. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.