Advertisement

Missing Case ಕಟಪಾಡಿ: ಮೀನುಗಾರ ನಾಪತ್ತೆ

09:39 PM Feb 06, 2024 | Team Udayavani |

ಕಾಪು: ಕಟಪಾಡಿ ಮಟ್ಟು ದುಗ್ಗುಪಾಡಿ ಶ್ರೀನಿವಾಸ ಸಾಲ್ಯಾನ್‌ (45) ಅವರು ಜ. 30ರಿಂದ ನಾಪತ್ತೆಯಾಗಿದ್ದಾರೆ.

Advertisement

ಮನೆಯಲ್ಲಿ ಒಬ್ಬರೇ ವಾಸವಿದ್ದ ಅವರು ಶೇಖರ್‌ ಮಾಲಕತ್ವದ ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಜ. 30ರಂದು ಕೆಲಸಕ್ಕೆ ಹೋಗದೇ ಪಕ್ಕದ ಮನೆಯವರಲ್ಲಿ ಕಟಪಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್‌ ಬಾರದೇ ಕಾಣೆಯಾಗಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತಲ್ಲಿ ಕಾಪು ಠಾಣೆ (0820-2551033)ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next