Advertisement
ನವ್ಯಾ ಸೆ. 15ರಂದು ಎಂದಿನಂತೆ ಕಾಲೇಜಿಗೆ ಹೋದವಳು ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದು, ಅಪರಾಹ್ನ 2.30 ಆದರೂ ಮನೆಗೆ ತಲುಪಿಲ್ಲ. ಮನೆಯವರು ಮೊಬೈಲ್‌ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ನವ್ಯಾ ಪತ್ತೆಯಾಗದ ಕಾರಣ ಆಕೆಯ ಹೆತ್ತವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೇ ವೇಳೆ ಪಣಿಯೂರು ನಿವಾಸಿ ದೀಕ್ಷಿತ್ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯಾ ವಿ. ಎಂಬಾಕೆ ಯೊಂದಿಗೆ ಹಿಂದೂ ಧರ್ಮದ ಪ್ರಕಾರದಲ್ಲಿ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪೊಲೀಸ್ ತನಿಖೆ ನಡೆಸದಂತೆ ಮದುವೆಯ ಫೋಟೋ ಸಹಿತವಾಗಿ ಕಟಪಾಡಿ ಹೊರ ಠಾಣೆಯ ಮೂಲಕ ವಾಗಿ ಕಾಪು ಪೊಲೀಸ್ ಠಾಣೆಗೆ ನೀಡಿ ರುವ ಮನವಿಯಲ್ಲಿ ತಿಳಿಸಿದ್ದಾರೆ.