ಮಂಗಳೂರು: ಬೆಳ್ತಂಗಡಿಯಿಂದ ಕುದ್ರೋಳಿ ದೇವಸ್ಥಾನಕ್ಕೆ ಬಂದಿದ್ದ ಗಣಪಿ (60) ಎಂಬವರು ನಾಪತ್ತೆಯಾಗಿದ್ದಾರೆ.
ತಾಲೂಕಿನ ಕಿಲ್ಲೂರು ಎಂಬಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸರಕಾರಿ ವಸತಿ ಗೃಹದ ವಾಸಿಯಾಗಿದ್ದ ರವಿ ಅವರು ತನ್ನ ತಾಯಿ ಗಣಪಿ, ಪತ್ನಿ ಹಾಗೂ ಮಗುವಿನೊಂದಿಗೆ ಅ.13ರಂದು ಕುದ್ರೋಳಿಗೆ ಬಂದಿದ್ದು, ರಾತ್ರಿ 7.30ರ ವೇಳೆ ಅವರ ಜೊತೆಗಿದ್ದ ತಾಯಿ ನಾಪತ್ತೆಯಾಗಿದ್ದಾರೆ.
ದೇವಸ್ಥಾನದಲ್ಲಿ ವಠಾರದಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. 4.5 ಅಡಿ ಎತ್ತರ, ಕಪ್ಪು ಮೈಬಣ್ಣ, ನೀಲಿ ಬಣ್ಣದ ಸೀರೆ ಧರಿಸಿದ್ದು, ಕಪ್ಪು ಬಣ್ಣದ ರವಿಕೆ ಧರಿಸಿದ್ದರು. ಮೂಗು ನತ್ತು ಮತ್ತು ಕಿವಿಯಲ್ಲಿ ಬೆಂಡೋಲೆ ಹಾಗೂ ಕುತ್ತಿಗೆಯಲ್ಲಿ ಮಣಿ ಸರ ಇತ್ತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಮಂಗಳೂರು: ಪಡೀಲ್ ಅಳಪೆ ನಿವಾಸಿ ಗಣೇಶ್ (48) ಎನ್ನುವವರು ನಾಪತ್ತೆಯಾಗಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಮನೆಯಿಂದ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
5.10 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, ಕುತ್ತಿಗೆ ಮತ್ತು ಕೈಯಲ್ಲಿ ಸೋರಿಯಾಸಿಸ್ ಕಲೆಗಳಿವೆ, ನೀಲಿ ಚೆಕ್ಸ್‌ಪಂಚೆ ಮತ್ತು ಗ್ರೇ ಬಣ್ಣದ ಟಿ ಶರ್ಟ್ ಧರಿಸಿದ್ದರು. ಕನ್ನಡ ತುಳು ಬಲ್ಲವರಾಗಿದ್ದಾರೆ. ಈ ಚಹರೆಯ ವ್ಯಕ್ತಿ ಕಂಡು ಬಂದಲ್ಲಿ ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.