Advertisement
ಪಶ್ಚಿಮ ಘಟ್ಟದ ತಪ್ಪಲ್ಲಿಗೆ ಹೊಂದಿಕೊಂಡಿರುವ ಮತ್ತು ದಟ್ಟ ಅರಣ್ಯಗಳಿಂದ ಆವೃತವಾದ ತೊಂಬಟ್ಟು ಮತ್ತು ಇರ್ಕಿಗದ್ದೆ ಪರಿಸರಲ್ಲಿ ಸಾಕಷ್ಟು ಕಾಡು ಪ್ರಾಣಿಗಳು, ದೊಡ್ಡ ದೊಡ್ಡ ಹೆಬ್ಟಾವುಗಳು, ಹುಲಿ-ಚಿರತೆಗಳು ಸಾಕಷ್ಟು ಇವೆ. ಇತಂಹ ದಟ್ಟವಾದ ಕಾಡಿನಲ್ಲಿ ಮರಗಳ ಮಧ್ಯೆ ಎತ್ತರ ಎತ್ತರವಾದ ಕುರುಚಲು ಗಿಡಗಳು ಇವೆ. ಈ ಗಿಡಗಳ ಮಧ್ಯೆ ಶೋಧ ಕಾರ್ಯ ಕಷ್ಟವಾದ ಕೆಲಸವಾಗಿದೆ. ದಟ್ಟವಾದ ಅರಣ್ಯದ ಒಳಗೆ ಸುಮಾರು 9 ಕಿ.ಮೀ ದೂರದವರೆಗೆ ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಶೋಧ ಕಾರ್ಯ ನಡೆಸಿದ್ದಾರೆ.
ಯುವಕನ ಮನೆಯಿಂದ 9 ಕಿ.ಮೀ. ದೂರದ ಪಶ್ಚಿಮ ಘಟ್ಟದ ತಪ್ಪಲ್ಲಿನ ತನಕ ಹುಡುಕಾಟ ನಡೆಸಿದ್ದು, ಶನಿವಾರ ಘಾಟಿ ಪರಿಸರದಲ್ಲಿ ಹುಡುಕಾಟ ನಡೆಯಲಿದೆ ಎಂದು ತಿಳಿದುಬಂದಿದೆ.