Advertisement

ಪ್ರತ್ಯೇಕ ಪ್ರಕರಣ: ಮಕ್ಕಳು, ಮಹಿಳೆಯರು ನಾಪತ್ತೆ 

03:43 PM Jun 25, 2023 | Team Udayavani |

ಮಂಡ್ಯ: ಜಿಲ್ಲೆಯ 4 ಪ್ರತ್ಯೇಕ ಪ್ರಕರಣಗಳಲ್ಲಿ 3 ಮಕ್ಕಳು, ಮೂವರು ಮಹಿಳೆಯರು ಸೇರಿ 6 ಮಂದಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದೆ.

Advertisement

ಕನಗನಮರಡಿ ಗ್ರಾಮದ ಯೋಗಾ ನಂದ(6) ಎಂಬುವವರು ಮೇ 1ರಂದು ಕಾಣೆಯಾಗಿದ್ದಾರೆ ಎಂದು ಪಾಂಡವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಬಾಲಕ 3 ಅಡಿ ಎತ್ತರವಿದ್ದು, ಸಾಧಾರಣ ಶರೀರ ಹೊಂದಿದ್ದು ಹಸಿರು ಬಿಳಿಗೆರೆ ಬಟ್ಟೆ ಧರಿಸಿರುತ್ತಾನೆ. ಮತ್ತೂಂದು ಪ್ರಕರಣದಲ್ಲಿ ಮಂಡ್ಯದ ಬಿ.ಯರಹಳ್ಳಿ ಗ್ರಾಮದ ಲಕ್ಷ್ಮೀ (25) ಎಂಬುವವರು ಜೂ.17ರಂದು ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆಯು 4 ಅಡಿ ಎತ್ತರವಿದ್ದು, ದುಂಡುಮುಖ, ಗೋ ಮೈಬಣ್ಣ, ಸಾಧಾರಣ ಶರೀರ, ಬಲ ಕೈನ ಮೇಲೆ ಎಲ್‌.ಆರ್‌ ಎಂಬ ಹಸಿರು ಹಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಪಿಂಕ್‌ ಬಣ್ಣದ ಸೀರೆ, ಆಕಾಶ ನೀಲಿ ಬಣ್ಣದ ಬ್ಲೌಸ್‌ ಧರಿಸಿರುತ್ತಾರೆ.

ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮದ್ದೂರಿನ ಚಿಕ್ಕಹೊಸಗಾವಿ ಗ್ರಾಮದ ಗೌರಮ್ಮ(22) ಎಂಬುವವರು ಜೂ.18ರಂದು ಕಾಣೆಯಾಗಿದ್ದಾರೆ ಎಂದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯು 4 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಹಸಿರು ಚೂಡಿದಾರ್‌, ಕಪ್ಪು ವೇಲ್‌, ಬಿಳಿ ಪ್ಯಾಂಟ್‌ ಧರಿಸಿರುತ್ತಾರೆ. ಇನ್ನೊಂದು ಪ್ರಕರಣದಲ್ಲಿ ಮದ್ದೂರಿನ ನಂಬಿ ನಾಯಕ ನಹಳ್ಳಿ ಗ್ರಾಮದ ಪೂಜಾ ಪಾಟೀಲ್‌(25) ಎಂಬುವವರು ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ.

ದೀಕ್ಷಿತ್‌(6), ಯಶಿಕಾ(4) ಎಂಬುವವರ ಜೊತೆ ಜೂ.22ರಂದು ಕಾಣೆಯಾಗಿದ್ದಾರೆ ಎಂದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದ ಮಹಿಳೆಯು 5 ಅಡಿ ಎತ್ತರವಿದ್ದು, ದುಂಡು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಸಿಮೆಂಟ್‌ ಕಲರ್‌ ಚೂಡಿದಾರ್‌ ಧರಿಸಿರುತ್ತಾರೆ. ದೀಕ್ಷಿತಾ (6) ಕೋಲು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಕೆಂಪು ಕಲರ್‌ ಫ್ರಾಕ್‌ ಧರಿಸಿರುತ್ತಾರೆ. ಯಶಿಕಾ (4) ದುಂಡು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಕಾಫಿ ಕಲರ್‌ ಫ್ರಾಕ್‌ ಧರಿಸಿರುತ್ತಾರೆ.

ಇವರ ಸುಳಿವು ಸಿಕ್ಕಲ್ಲಿ ಮಂಡ್ಯ ಜಿಲ್ಲಾ ಪೊಲೀಸ್‌ ನಿಯಂತ್ರಣ ಕೊಠಡಿ ಮೊ: 9480804800 ಅಥವಾ ಸಂಬಂಧಿಸಿದ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next