ಕೋಝಿಕ್ಕೋಡ್: ಕೇರಳದ ಮಲಪ್ಪುರಂನಲ್ಲಿ ಹೋಟೆಲ್ ಉದ್ಯಮಿಯೊಬ್ಬರ ದೇಹದ ಭಾಗಗಳು ಟ್ರಾಲಿ ಬ್ಯಾಗ್ ನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತರನ್ನು ಹೋಟೆಲ್ ಉದ್ಯಮಿ ಸಿದ್ದಿಕ್(58) ಎಂದು ಗುರುತಿಸಲಾಗಿದೆ. ಅವರು ಮೇ 18 ರಿಂದ ನಾಪತ್ತೆಯಾಗಿದ್ದರು.
ತಂದೆ ನಾಪತ್ತೆಯಾಗಿದ್ದಾರೆ ಎಂದು ಸಿದ್ದಿಕ್ ಪುತ್ರ ದೂರು ದಾಖಲಿಸಿದ್ಧರು. ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಯಿತು. ತನಿಖೆಯಲ್ಲಿ ಸಿದ್ದಿಕ್ ಬ್ಯಾಂಕ್ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ.
ಹೋಟೆಲ್ ಕೊಠಡಿಯಿಂದ ಹೊರಬರುವಾಗ ಇಬ್ಬರೂ ಎರಡು ಟ್ರಾಲಿ ಬ್ಯಾಗ್‌ಗಳನ್ನು ಹೊತ್ತೊಯ್ದಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Related Articles
ಕೊಲೆ ಮಾಡಿ ಎರಡು ಪ್ರತ್ಯೇಕ ಟ್ರಾಲಿ ಬ್ಯಾಗ್‌ಗಳಲ್ಲಿ ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಹಾಕಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಒಬ್ಬರು ಮೃತರ ಹೋಟೆಲ್‌ನಲ್ಲಿ ಉದ್ಯೋಗಿ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಶಂಕಿತ ಮಹಿಳೆ, ಉದ್ಯೋಗಿಯ ಸ್ನೇಹಿತೆ ಎಂದು ಹೇಳಲಾಗಿದೆ.ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ .