Advertisement

Missing; ಬಿಎಸ್‌ಎಫ್ ಯೋಧ ಬಿಹಾರದ ಮನೆಯಲ್ಲಿ ಪತ್ತೆ: ಇಲಾಖಾ ವಿಚಾರಣೆ

05:21 PM Sep 10, 2023 | Team Udayavani |

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ತನ್ನ ಕರ್ತವ್ಯದ ಸ್ಥಳದಿಂದ ನಾಪತ್ತೆಯಾದ ಎರಡು ದಿನಗಳ ನಂತರ,ಬಿಎಸ್‌ಎಫ್ ಯೋಧ ಬಿಹಾರದ ನಿವಾಸದಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

Advertisement

ಶುಕ್ರವಾರ ಮುಂಜಾನೆ ಬಾಲಕೋಟ್ ಸೆಕ್ಟರ್‌ನ ಭರಣಿಯ ಫಾರ್ವರ್ಡ್ ಪೋಸ್ಟ್‌ನಿಂದ ಯೋಧ ಕಾಣೆಯಾಗಿದ್ದ ಎಂದು ವರದಿಯಾಗಿದ್ದು, ನಂತರ ಬಿಎಸ್‌ಎಫ್ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ವರದಿಯನ್ನು ದಾಖಲಿಸಿತ್ತು.

ಏಕಾಏಕಿ ನಾಪತ್ತೆಯಾದ ಯೋಧನನ್ನು ಭಾನುವಾರ ಬೆಳಗ್ಗೆ ಬಿಹಾರದಲ್ಲಿರುವ ಆತನ ಮನೆಯಲ್ಲಿ ಪತ್ತೆ ಹಚ್ಚಲಾಗಿದ್ದು, ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನುಮತಿಯಿಲ್ಲದೆ ತನ್ನ ಕೆಲಸವನ್ನು ಬಿಟ್ಟು ಹೋಗಿದ್ದಕ್ಕಾಗಿ ಬಿಎಸ್‌ಎಫ್, ಯೋಧನ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next