ನ್ಯೂಯಾರ್ಕ್: ಇರಾನ್ ವಿರುದ್ಧ ಹೋರಾಡಲು ಇಸ್ರೇಲ್‌ಗೆ ಈಗ ಆನೆ ಬಲ ದೊರಕಿದಂತಾಗಿದೆ. ಭಾರೀ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಥಾಡ್ (ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಸಿಸ್ಟಮ್) ವ್ಯವಸ್ಥೆಯನ್ನು ಅಮೆರಿಕ ಇಸ್ರೇಲ್‌ಗೆ ನೀಡಿದೆ. ಥಾಡ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ಅಗತ್ಯವಿರುವ 100 ಮಂದಿ ಸೈನಿಕರನ್ನೂ ಸಹ ಅಮೆರಿಕ ಕಳುಹಿಸಿ ಕೊಟ್ಟಿದ್ದು, ಇಸ್ರೇಲ್‌ನ ಕ್ಷಿಪಣಿ ಬಲ ಮತ್ತಷ್ಟು ಹೆಚ್ಚಾಗಿದೆ.
ಹೇಗಿರಲಿದೆ ಥಾಡ್ ವ್ಯವಸ್ಥೆ?:
ಇದು 6 ಟ್ರಕ್‌ಗಳ ಮೇಲೆ ನಿರ್ಮಾಣ ಮಾಡ ಲಾದ ಕ್ಷಿಪಣಿ ತಡೆ ವ್ಯವಸ್ಥೆಯಾಗಿದ್ದು, ಪ್ರತೀ ಟ್ರಕ್ ಮೇಲೆ 8 ಕ್ಷಿಪಣಿ ತಡೆ ವ್ಯವಸ್ಥೆ ಇರುತ್ತದೆ. ಇದರಲ್ಲಿ ಅತ್ಯಾ ಧುನಿಕ ರಾಡರ್ ವ್ಯವಸ್ಥೆ ಇದ್ದು, ಇದು ಎಲ್ಲ ಮಾದರಿಯ ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
ಈಗಾಗಲೇ ಈ ವ್ಯವಸ್ಥೆಯನ್ನು ಅಮೆ ರಿಕ ಇಸ್ರೇಲ್‌ನ ಗಡಿ ಪ್ರದೇಶಗಳಲ್ಲಿ ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್ ಮೇಲೆ ಇರಾನ್ ದಾಳಿ ಮಾಡಿದ ಬಳಿಕ ಈ ವ್ಯವಸ್ಥೆಯನ್ನು ಅಮೆರಿಕ ನೀಡಿರುವುದು, ಇಸ್ರೇಲ್ ಇರಾನ್ ಮೇಲೆ ದಾಳಿ ಕೈಗೊಳ್ಳುವ ಆತಂಕವನ್ನು ಸೃಷ್ಟಿಮಾಡಿದೆ.