ಶಿವಮೊಗ್ಗ: ಮಾಜಿ ಕೆ.ಎಸ್.ಈಶ್ವರಪ್ಪ ಅವರಿಗೆ ಭಾನುವಾರ ರಾತ್ರಿ ಕಜಿಕಿಸ್ತಾನ ನಂಬರ್ ನಿಂದ ಮಿಸ್ಡ್ ಕಾಲ್ ಬಂದಿದ್ದು, ಜಿಲ್ಲಾ ರಕ್ಷಣಾಧಿಕಾರಿಗೆ ಸೋಮವಾರ ದೂರು ಸಲ್ಲಿಸಿದರು.
ನನಗೆ ಹಿಂದಿನಿಂದಲೂ ಬೆದರಿಕೆ ಕರೆಗಳು ಬರುತ್ತಿವೆ. ಇದು ಸಹ ಯಾವುದೋ ದುಷ್ಕರ್ಮಿಗಳದ್ದು ಇರಬಹುದು ಎಂದು ದೂರು ದಾಖಲಿಸಿದ್ದಾರೆ. ಭಾನುವಾರ ರಾತ್ರಿ 12.30ಕ್ಕೆ +7(678)815-46-5 ನಂಬರ್ ನಿಂದ ಮಿಸ್ಡ್ ಕಾಲ್ ಬಂದಿದೆ. ಹಾಗಾಗಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ದೂರು ನೀಡುತ್ತಿರುವೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ:ಬಜರಂಗದಳ ನಿಷೇಧ ವಿಚಾರ: ಮಲ್ಲಿಕಾರ್ಜುನ ಖರ್ಗೆಗೆ ಸಮನ್ಸ್ ನೀಡಿದ ಪಂಜಾಬ್ ಕೋರ್ಟ್
ಈ ಹಿಂದೆ ಮಹಾರಾಷ್ಟ್ರದ ಜಯೇಶ್ ಅಲಿಯಾಸ್ ಶಾಹೀರ್ ಶೇಕ್ ಎಂಬುವರು ನನ್ನ ಕೊಲೆಗೆ ಯತ್ನ ನಡೆಸುವ ಬಗ್ಗೆ ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು. ಆತ ಪಿಎಫ್‌ಐ ಕಾರ್ಯಕರ್ತ ಎಂದು ಎನ್‌ಐಎ ಹೇಳಿತ್ತು ಎಂದು ಈಶ್ವರಪ್ಪನವರೇ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.