Advertisement

ಕಿರುತೆರೆಯಿಂದ ಮಿಸ್‌ ಆಗಲಿದ್ದಾರಾ ರಾಧಾ ಮಿಸ್‌

06:14 PM Apr 27, 2019 | Team Udayavani |

ಕಿರುತೆರೆಯ ಪ್ರೇಕ್ಷಕರಿಗೆ ರಾಧಾ ಮಿಸ್‌ ಅಂದ್ರೆ ಥಟ್ಟನೆ ನೆನಪಾಗುವ ಹೆಸರು ಶ್ವೇತಾ ಪ್ರಸಾದ್‌. ಹೌದು, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್‌ ಪಾತ್ರದಲ್ಲಿ ಅಸಂಖ್ಯಾತ ನೋಡುಗರ ಮನ ಗೆದ್ದಿರುವ ನಟಿ ಶ್ವೇತಾ ಪ್ರಸಾದ್‌, ಶೀಘ್ರದಲ್ಲಿಯೇ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್‌ ಪಾತ್ರಕ್ಕೆ ಗುಡ್‌ ಬೈ ಹೇಳಲಿದ್ದಾರಂತೆ. ಅಂದಹಾಗೇ, ಈ ವಿಷಯವನ್ನು ಖಚಿತಪಡಿಸಿರುವುದು ಬೇರ್ಯಾರೂ ಅಲ್ಲ, ಸ್ವತಃ ಶ್ವೇತಾ ಪ್ರಸಾದ್‌ ಉರೂಫ್ ರಾಧಾ ಮಿಸ್‌.

Advertisement

ಹೌದು, ನಟಿ ಶ್ವೇತಾ ಪ್ರಸಾದ್‌ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿಲ್ಲ. ಅದಕ್ಕೆ ಕಾರಣ ರಾಧಾ ರಮಣ ಧಾರಾವಾಹಿಯಲ್ಲಿ ಶ್ವೇತಾ ಪ್ರಸಾದ್‌ ಅವರ ಒಪ್ಪಂದ ಮುಗಿದಿರುವುದು. ರಾಧಾ ರಮಣ ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿದೆ. ಆದರೂ ರಾಧಾ ರಮಣ ಜನಪ್ರಿಯತೆಯಲ್ಲಿ ಸಾಗುತ್ತಿರುವಾಗ ಅದರಿಂದ ಹೊರಬಂದರೆ, ನಿರ್ಮಾಣ ಸಂಸ್ಥೆಗೆ, ನಿರ್ದೇಶಕರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಇಷ್ಟು ಸಮಯ ಶ್ವೇತಾ ಧಾರಾವಾಹಿಯಲ್ಲಿ ಅಭಿನಯ ಮುಂದುವರೆಸಿದ್ದರಂತೆ. ಸದ್ಯ ರಾಧಾ ರಮಣ ಧಾರಾವಾಹಿಯ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಕೂಡ ಧಾರಾವಾಹಿಯಿಂದ ಹೊರಹೋಗಲು ಗ್ರೀನ್‌ ಸಿಗ್ನಲ್‌ ಕೊಟ್ಟಿರುವುದರಿಂದ ಶ್ವೇತಾ ಪ್ರಸಾದ್‌ ಇನ್ನೆರಡು ವಾರದೊಳಗೆ ರಾಧಾ ಮಿಸ್‌ ಪಾತ್ರದಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಶ್ವೇತಾ ಪ್ರಸಾದ್‌ ರಾಧಾ ರಮಣ ಧಾರಾವಾಹಿಯಲ್ಲಿ ರಮಣ ಪಾತ್ರಧಾರಿಗೆ ರಾಧಾ ಎಂಬ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ರಾಧಾ ಪಾತ್ರ ಶ್ವೇತಾ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನೋಡು ನೋಡುತ್ತಿದ್ದಂತೆ ಕಿರುತೆರೆಯಲ್ಲಿ ಶ್ವೇತಾ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವೇ ಸೃಷ್ಟಿ ಯಾಗಿತ್ತು. ಇದೇ ವೇಳೆ ಚಿತ್ರರಂಗ ದಿಂದಲೂ ಶ್ವೇತಾ ಪ್ರಸಾದ್‌ಗೆ ಹಲವು ಅವಕಾಶಗಳು ಬರಲು ಶುರು ವಾಯಿತು. ಇತ್ತೀಚೆಗೆ ತೆರೆಕಂಡಿದ್ದ ಕಳ್ಬೆಟ್ಟದ ದರೋಡೆಕೋರರು ಚಿತ್ರದಲ್ಲಿ ಶ್ವೇತಾ ಪ್ರಸಾದ್‌ ನಾಯಕ ನಟಿಯಾಗಿ ಬೆಳ್ಳಿತೆರೆಗೂ ಅಡಿಯಿಟ್ಟಿದ್ದರು. ಸದ್ಯ ರಾಧಾ ರಮಣ ಧಾರಾವಾಹಿಯಿಂದ ಹೊರಬರುತ್ತಿರುವ ಶ್ವೇತಾ ಪ್ರಸಾದ್‌, ಸ್ವಲ್ಪ ದಿನಗಳ ಕಾಲ ನಟನೆಯಿಂದ ಬ್ರೇಕ್‌ ತೆಗೆದುಕೊಂಡು ನಂತರ ಬೇರೆ ಪಾತ್ರದ ಮೂಲಕ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ, ರಾಧಾ ರಮಣ ಧಾರಾವಾಹಿಯಿಂದ “ಮಿಸ್‌’ ಆಗಲಿರುವ ರಾಧಾ ಮಿಸ್‌ ಮತ್ತೆ ಬೇರೆ ಧಾರಾವಾಹಿಯಲ್ಲಿ ಕಿರುತೆರೆಯಲ್ಲೇ ಕಾಣಿಸಿಕೊಳ್ಳುತ್ತಾರಾ ಅಥವಾ ಸಿನಿಮಾದ ಮೂಲಕ ಹಿರಿತೆರೆ ಯಲ್ಲಿ ಕಾಣಿಸಿ ಕೊಳ್ಳುತ್ತಾರಾ ಅನ್ನೋದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್‌ ಆಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next