ನಟಿ ಪ್ರಿಯಾಂಕಾ ಉಪೇಂದ್ರ “ಮಿಸ್. ನಂದಿನಿ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ ಬೆಂಗಳೂರಿನ ಹೊರವಲಯದ ಕಡಬಗೆರೆ ಬಳಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಿ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಇನ್ನುಹೆಸರೇ ಹೇಳುವಂತೆ, “ಮಿಸ್. ನಂದಿನಿ’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಟಿ ಪ್ರಿಯಾಂಕಾಉಪೇಂದ್ರ ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಮಿಸ್. ನಂದಿನಿ’ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆ, ಮಾತಿಗೆ ಸಿಕ್ಕ ಪ್ರಿಯಾಂಕಾ, ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮತ್ತು ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದರು. “ಮೊದಲ ಬಾರಿಗೆ ಇಂಥದ್ದೊಂದು ಸಬ್ಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಮ್ಮ ಮಕ್ಕಳು ಗೌರ್ನಮೆಂಟ್ ಸ್ಕೂಲ್‌ನಲ್ಲಿ ಓದಬೇಕಾ ಅಥವಾ ಪ್ರೈವೇಟ್ ಸ್ಕೂಲ್‌ನಲ್ಲಿ ಓದಬೇಕಾ ಅಂಥಡಿಸ್ಕಷನ್ ಸುತ್ತಮುತ್ತ ಆಗಾಗ್ಗೆ ನಡೆಯುತ್ತಿರುತ್ತದೆ. ಇಂಥ ವಿಷಯವನ್ನ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರುವುದಿಲ್ಲ. ಇದೇ ಸಬೆjಕ್ಟ್ ಇಟ್ಟುಕೊಂಡು ಈ ಸಿನಿಮಾ ಬರುತ್ತಿದೆ. ಇದರಲ್ಲಿ ನನ್ನದು ಪ್ರೈಮೆರಿ ಸ್ಕೂಲ್ ಟೀಚರ್ ಪಾತ್ರ. ತುಂಬ ಎಮೋಶನ್ ಸೀನ್‌ಗಳು ಇದರಲ್ಲಿದೆ. ನಾನೂ ಟೀಚರ್ ಆಗ್ಬೇಕು ಅಂಥಅಂದುಕೊಂಡಿದ್ದೆ. ಆದ್ರೆ ನಿಜ ಜೀವನದಲ್ಲಿ ಅದು ಆಗಿರಲಿಲ್ಲ. ಈಗ ಸಿನಿಮಾದಮೂಲಕ ಆ ಕನಸು ನನಸಾಗುತ್ತಿದೆ. ಒಳ್ಳೆಯ ಟೀಮ್ ವರ್ಕ್‌ನಿಂದ ಇಡೀಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ. ಪ್ರೇಕ್ಷಕರಿಗೆ ತುಂಬ ಇಷ್ಟವಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ಹಿರಿಯ ನಟಿ ಭವ್ಯಾ “ಮಿಸ್. ನಂದಿನಿ’ ಚಿತ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹುಡುಗಿಯೊಬ್ಬಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಈ ಸಿನಿಮಾದ ಸಬ್ಜೆಕ್ಟ್ ಕೇಳುತ್ತಿದ್ದಂತೆ, ತುಂಬ ಇಷ್ಟವಾಯ್ತು. ಇದು ನಮ್ಮ ನಡುವೆಯೇ ನಡೆಯಯವಂಥ ಕಥೆ. ಪ್ರತಿಯೊಂದು ಪಾತ್ರಗಳು ಮತ್ತು ದೃಶ್ಯಗಳು ನೈಜವಾಗಿ ಮೂಡಿಬರುತ್ತಿದೆ. ಬಹಳ ದಿನಗಳ ನಂತರ ಒಂದೊಳ್ಳೆತಂಡದ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ’ ಎನ್ನುವುದು ಭವ್ಯಾ ಮಾತು.
ಚಿತ್ರದಲ್ಲಿ ನಟ ಡ್ಯಾನಿ ಕುಟ್ಟಪ್ಪ ಎಸ್‌ಡಿಎಂಸಿ ಅಧ್ಯಕ್ಷನಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಒಂದು ಸರ್ಕಾರಿ ಶಾಲೆಯನ್ನು ಹೇಗೆ ಹಾಳು ಮಾಡಬಹುದು ಎಂದು ತೋರಿಸುವಂಥ ಪಾತ್ರ ನನ್ನದು. ತುಂಬ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದೆ. ಪ್ರತಿಯೊಬ್ಬ ಪೋಷಕರು ನೋಡಬೇಕಾದ ಸಿನಿಮಾ ಇದು’ ಎನ್ನುತ್ತಾರೆ ಡ್ಯಾನಿ ಕುಟ್ಟಪ್ಪ.
“ಮಿಸ್. ನಂದಿನಿ’ ಚಿತ್ರದ ನಿರ್ದೇಶಕ ಗುರುದತ್, ಸಂಗೀತ ನಿರ್ದೇಶಕ ಸಾಯಿ ಸರ್ವೇಶ್ ಮತ್ತಿತರರು ಚಿತ್ರೀಕರಣದ ಅನುಭವ ಹಂಚಿಕೊಂಡರು. “ಆರ್.ಕೆ ಫಿಲಂಸ್’ಬ್ಯಾನರ್ ಅಡಿಯಲ್ಲಿ ರಾಮ್ ಕುಮಾರ್ ಕತ್ತಿ “ಮಿಸ್. ನಂದಿನಿ’ ಚಿತ್ರಕ್ಕೆ ಬಂಡವಾಳ ಹೂಡಿನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ಅಪರ್ಣಾ, ಕೆ.ಪಿ ಶ್ರೀಧರ್, ಸೂರಜ್,ಅನಮೋಲ್, ಮಹೇಂದ್ರ, ಮಲ್ಲಿಕಾ, ರಾಕೇಶ್, ಶಶಿಧರ್ ಗೌಡ ಮೊದಲಾದವರು ಇತರಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಚಿತ್ರತಂಡ ಜುಲೈ ವೇಳೆಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.