Advertisement

ಸ್ತನ ಕ್ಯಾನ್ಸರ್‌ನಿಂದ 28 ವರ್ಷದ ಮಾಜಿ ಮಿಸ್ ಇಂಡಿಯಾ ತ್ರಿಪುರಾ ರಿಂಕಿ ಚಕ್ಮಾ ನಿಧನ

04:44 PM Feb 29, 2024 | Team Udayavani |

ಅಗರ್ತಲಾ: ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಮಾಜಿ ಮಿಸ್ ಇಂಡಿಯಾ ತ್ರಿಪುರಾ ರಿಂಕಿ ಚಕ್ಮಾ(28) ನಿಧನರಾಗಿದ್ದಾರೆ.

Advertisement

ಫೆ.22 ರಂದು ರಿಂಕಿ ಚಕ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.ಆದರೆ ಅವರ ಆರೋಗ್ಯ ಹದಗೆಡಲು ಶುರುವಾಗಿತ್ತು. ಇದರಿಂದ ಕೀಮೋಥೆರಪಿ ನಡೆಸಲು ವಿಫಲವಾಗಿತ್ತು.

ರಿಂಕಿ ಚಕ್ಮಾ ಅವರಿಗೆ 2022 ರಲ್ಲಿ ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಇದಕ್ಕೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಾಣಿಸಿಕೊಂಡ ಕ್ಯಾನ್ಸರ್ ಅವಳ ಶ್ವಾಸಕೋಶಕ್ಕೆ ಹರಡಿತು. ಇದರ ಪರಿಣಾಮವಾಗಿ ಮೆದುಳಿನ ಗೆಡ್ಡೆ ಉಂಟಾಗಿತ್ತು. ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಸ್ತನದ ಅಪರೂಪದ ಗೆಡ್ಡೆಯಾಗಿದ್ದು, ಸಾಮಾನ್ಯವಾಗಿ 35 ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಇದು ಪರಿಣಾಮ ಬೀರುತ್ತದೆ.

ಇತ್ತೀಚೆಗೆ ಚಕ್ಮಾ ಅವರ ಆಪ್ತ ಸ್ನೇಹಿತೆ ಮತ್ತು ಮಿಸ್ ಇಂಡಿಯಾ 2017 ರ ರನ್ನರ್ ಅಪ್ ಪ್ರಿಯಾಂಕಾ ಕುಮಾರಿ ಅವರ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ತಮ್ಮ ವೈದ್ಯಕೀಯ ವರದಿಯನ್ನು ಹಂಚಿಕೊಂಡಿದ್ದರು.

ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ತ್ರಿಪುರಾ ಕಿರೀಟವನ್ನು ಗೆದ್ದಿದ್ದರು. ಮಿಸ್ ಇಂಡಿಯಾ ಫೈನಲಿಸ್ಟ್ ಆಗಿ ರಿಂಕಿ ಮಿಸ್ ಕಾನ್ಜೆನಿಯಾಲಿಟಿ ಮತ್ತು ಬ್ಯೂಟಿ ವಿತ್ ಎ ಪರ್ಪಸ್ ಎಂಬ ಎರಡು ಉಪ ಟೈಟಲ್‌ ನ್ನು ಗೆದ್ದಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next