Advertisement
ಲೋಕಸಭಾ ಟಿಕೆಟ್ ಹಂಚಿಕೆಯಾದ ಕ್ಷಣದಿಂ ದಲೂ ಶೆಟ್ಟರ್ ಹಾಗೂ ಬೊಮ್ಮಾಯಿ ಪೈಕಿ ಒಬ್ಬ ರಿಗೆ ಅದೃಷ್ಟ ಒಲಿಯುತ್ತದೆ ಎಂದೇ ವ್ಯಾಖ್ಯಾನಿ ಸಲಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇವರಿಬ್ಬರಿಗೆ ತಾವು ಕೇಂದ್ರ ಸಂಪುಟ ಸೇರ್ಪಡೆ ಸಾಧ್ಯತೆ ಕ್ಷೀಣಿ ಸಿದೆ ಎಂಬ ಅರಿವಾಗುತ್ತಿತ್ತು. ಆದರೆ ಲಿಂಗಾಯತ ಕೋಟಾದಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡುತ್ತಿರುವ ವಿ.ಸೋಮಣ್ಣ ಅವರಿಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆ ಇದ್ದಿರಲಿಲ್ಲ.
Related Articles
ಬೆಂಗಳೂರು ಕೇಂದ್ರ ಲೋಕಸಭಾ ಕೇಂದ್ರದಿಂದ ಸತತ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ಪಿ.ಸಿ.ಮೋಹನ್ ಅವರಿಗೆ ಓಬಿಸಿ ಕೋಟಾದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಶೋಭಾ ಕರಂದ್ಲಾಜೆ ಅವ ಕಾಶ ಪಡೆದುಕೊಂಡಿದ್ದಾರೆ. ಒಕ್ಕಲಿಗ ಕೋಟಾ ಕ್ಕಿಂತ ಹೆಚ್ಚಾಗಿ ಮಹಿಳಾ ಪ್ರಾತಿನಿಧ್ಯ ಶೋಭಾ ಪರ ಅವಕಾಶ ಸೃಷ್ಟಿಸಿದೆ. ಎಲ್ಲ ಕ್ಕಿಂತ ಹೆಚ್ಚಾಗಿ ಕೃಷಿ ಇಲಾಖೆ ರಾಜ್ಯ ಖಾತೆಯನ್ನು ಶೋಭಾ ನಿಭಾಯಿಸಿದ ಪರಿ ದಿಲ್ಲಿ ನಾಯಕರ ಮೆಚ್ಚುಗೆಗೆ ಪಾತ್ರವಾಗಿತ್ತು ಎನ್ನಲಾಗಿದೆ.
Advertisement
ಹ್ಯಾಟ್ರಿಕ್ ವೀರನಿಗಿಲ್ಲ ಮನ್ನಣೆ ಇದೆಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಸಕ್ರಿಯ ಸಂಸದರ ಪೈಕಿ ಮುಂಚೂಣಿಯಲ್ಲಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಸಾಧನೆ ಮಾಡಿರುವ ಬಿ.ವೈ.ರಾಘ ವೇಂದÅ ಅವರ ಕೇಂದ್ರ ಸಂಪುಟ ಸೇರ್ಪಡೆ ಕನಸು ಕೂಡ ಭಗ್ನವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ರಾಗಿ ಸೋದರ ಬಿ.ವೈ.ವಿಜಯೇಂದ್ರ ಈಗಾಗಲೇ ಅಧಿಕಾರದಲ್ಲಿರುವುದು ರಾಘವೇಂದ್ರ ಅವರಿಗೆ ಅವಕಾಶ ತಪ್ಪುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.