Advertisement

ನವ್ಯತಾಗೆ ಮಿಸ್‌ ಧಾರವಾಡ ಕಿರೀಟ

12:31 PM Nov 06, 2017 | Team Udayavani |

ಧಾರವಾಡ: ರೌಂಡ್‌ ಟೇಬಲ್‌ ಇಂಡಿಯಾ ಸಂಸ್ಥೆಯು ನಗರದಲ್ಲಿ ಆಯೋಜಿಸಿದ್ದ ಮಿಸ್‌ ಧಾರವಾಡ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನವ್ಯತಾ ರೈ ಮಿಸ್‌ ಧಾರವಾಡ ಆಗಿ ಹೊರ ಹೊಮ್ಮಿದರು. ಮೊದಲ ರನ್ನರ್‌ ಅಪ್‌ ಆಗಿ ಜ್ಯೋತಿ ಪವಾರ್‌, 2ನೇ ರನ್ನರ್‌ ಅಪ್‌ ಆಗಿ ಶ್ರದ್ಧಾ ದಾಮೋದರ್‌ ಆಯ್ಕೆಯಾದರು. ಅಂತಿಮ ಸುತ್ತಿನಲ್ಲಿ 32 ಯುವ ರೂಪದರ್ಶಿಯರು ಪಾಲ್ಗೊಂಡಿದ್ದರು.

Advertisement

ಪರೀಕ್ಷೆಗಳ ಪ್ರತಿಯೊಂದು ಸುತ್ತಿನಲ್ಲೂ ರೂಪದರ್ಶಿಯರು ತಮ್ಮ ಸೌಂದರ್ಯವನ್ನು ಮಾರ್ಜಾಲ ನಡಿಗೆಯ ಮೂಲಕ ಪ್ರದರ್ಶಿಸಿದರು. ಮೊದಲ ಸುತ್ತಿನಲ್ಲಿ ರ್‍ಯಾಂಪ್‌ ತುಳಿದ ರೂಪದರ್ಶಿಯರಲ್ಲಿ ಮುಂದಿನ ಸುತ್ತಿಗೆ 10 ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕಿತ್ತು. ಆದರೆ ಅಂಕಗಳು ಸಮಾನಾದ ಕಾರಣ ಹೆಚ್ಚುವರಿ ಇಬ್ಬರು ರೂಪದರ್ಶಿಯರನ್ನು ಆಯ್ಕೆ ಮಾಡಲಾಯಿತು.

ಅಂತಿಮ ಆಯ್ಕೆಗಾಗಿ ಹಲವು ಸುತ್ತುಗಳ ಪರೀಕ್ಷೆಯ ಬಳಿಕ ವಿಜೇತರ ಪಟ್ಟಿ ಘೋಷಿಸಲಾಯಿತು. ರೂಪದರ್ಶಿ ಪ್ರತಿಭಾ ಸಂಶಿಮಠ, ಮಲ್ಲಿಕಾರ್ಜುನ ಪಾಟೀಲ ನಿರ್ಣಾಯಕರಾಗಿ ಆಗಮಿಸಿದ್ದರು. ಪ್ರತಿ ಸುತ್ತಿನ ನಂತರವೂ ವಿವಿಧ ತಂಡಗಳಿಂದ ನೃತ್ಯ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next