Advertisement
ದಿವ್ಯಾ ಪ್ರಭು ಪ್ರಯಾಣಿಸಿದ ಬಸ್ಸಿನ ನಂಬ್ರ ಕೆಎ 19 ಎಫ್ 3143 ಆಗಿದ್ದು, ನೀಡಲಾದ ಟಿಕೆಟ್‌ನಲ್ಲಿ ಬಸ್ಸಿನ ಸಂಖ್ಯೆ ಕೆಎ 19 ಎಫ್ 2707 ಎಂದು ನಮೂದಾಗಿದೆ. ಪ್ರಕರಣದ ವಿಚಾರಣೆ ವೇಳೆ ಟಿಕೆಟ್‌ನಲ್ಲಿರುವ ಬಸ್ಸಿನ ಸಂಖ್ಯೆ ಪ್ರಮುಖ ದಾಖಲೆ ಆಗಿರುವುದರಿಂದ ನ್ಯಾಯಾಲಯದಲ್ಲಿ ಮೃತ ಮಹಿಳೆಯ ಪರವಾಗಿ ಸಲ್ಲಿಸುವ ದಾಖಲೆಗೂ ಅಪಘಾತಕ್ಕೀಡಾದ ಬಸ್ಸಿನ ಸಂಖ್ಯೆಗೂ ಹೊಂದಾಣಿಕೆಯಾಗದೆ ಕುಟುಂಬಕ್ಕೆ ಪರಿಹಾರ ಸಿಗಲು ತೊಂದರೆಯಾಗಲಿದೆ.
ಮಾ. 15ರಂದು ತಾನು ಮಂಗಳೂರಿನಿಂದ ಪುತ್ತೂರಿಗೆ ಕೆಎ 21 ಎಫ್ 0100 ನಂಬರಿನ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಟಿಕೆಟ್‌ನಲ್ಲಿ ಬಸ್ಸಿನ ಸಂಖ್ಯೆ ಕೆಎ 19 ಎಫ್ 2660 ಎಂದಿತ್ತು. ನಿರ್ವಾಹಕನನ್ನು ವಿಚಾರಿಸಿದಾಗ “ನಾವೇನು ಮಾಡೋದು ಸರ್, ಆಫೀಸಿನಲ್ಲಿ ನಮಗೆ ಕೊಡುವ ಮಿಷಿನ್‌ನಲ್ಲಿ ಟಿಕೆಟ್ ಕೊಡುವುದು ಮಾತ್ರ ನಮ್ಮ ಕೆಲಸ. ಅದರಲ್ಲಿ ಯಾವ ಬಸ್ಸಿನ ನಂಬ್ರ ಫೀಡ್ ಆಗಿದೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ’ ಎಂದು ತಿಳಿಸಿದ್ದಾರೆ ಎಂದು ಉಪ್ಪಿನಂಗಡಿ ನಿವಾಸಿ ವಿನಾಯಕ ಪ್ರಭು ಯಾನೆ ಮುನ್ನಾ ಹೇಳುತ್ತಿದ್ದಾರೆ.