Advertisement

ಮಿಷನ್‌ ಶಕ್ತಿ ಭಾಷಣ: ಮೋದಿಗೆ ಕ್ಲೀನ್‌ಚಿಟ್‌

02:49 PM Mar 31, 2019 | mahesh |

ಹೊಸದಿಲ್ಲಿ: ಉಪಗ್ರಹ ನಿಗ್ರಹ ತಂತ್ರಜ್ಞಾನ “ಮಿಷನ್‌ ಶಕ್ತಿ’ ಪ್ರಕಟನೆಗೆ ಸಂಬಂಧಿ ಪ್ರಕರಣದಲ್ಲಿ ಪ್ರಧಾನಿ ಮೋದಿಯವರಿಗೆ ಕೇಂದ್ರ ಚುನಾವಣ ಆಯೋಗ ಕ್ಲೀನ್‌ ಚಿಟ್‌ ನೀಡಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನೀಡಿದ್ದ ದೂರಿನನ್ವಯ ಸಮಿತಿಯೊಂದನ್ನು ರಚಿಸಿದ್ದ ಆಯೋಗ ತನಿಖೆ ನಡೆಸಿದೆ. ಈ ಸಮಿತಿಯು ಪ್ರಧಾನಿ ಮೋದಿ ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.

Advertisement

ಸರಕಾರಿ ದೂರದರ್ಶನದಲ್ಲೂ ಮೋದಿ ಭಾಷಣ ನೇರಪ್ರಸಾರವಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಯೆಚೂರಿ ಅವರ ಆಕ್ಷೇಪಣೆಗೆ ಸಮಿತಿ ಉತ್ತರಿಸಿದೆ. ಈ ಬಗ್ಗೆ ಡಿಡಿ ನ್ಯೂಸ್‌ನಿಂದ ಸ್ಪಷ್ಟೀಕರಣ ಕೇಳಿದಾಗ, ಅದು ಖಾಸಗಿ ಸುದ್ದಿಸಂಸ್ಥೆ ಎಎನ್‌ಐನಿಂದ ದೃಶ್ಯಾವಳಿ ಪಡೆದಿದ್ದಾಗಿ ತಿಳಿಸಿದೆ. ಇಲ್ಲೂ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸಮಿತಿ ಉತ್ತರಿಸಿದೆ.

ಉಪಗ್ರಹ ನಿಗ್ರಹ ತಂತ್ರಜ್ಞಾನವನ್ನು ಡಿಆರ್‌ಡಿಒ ವಿಜ್ಞಾನಿಗಳು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದ್ದರು. ಆ ಮೂಲಕ ಭಾರತ, ಈ ತಂತ್ರಜ್ಞಾನವುಳ್ಳ 4ನೇ ರಾಷ್ಟ್ರವಾಗಿತ್ತು. ಈ ಯಶಸ್ಸನ್ನು ಬುಧವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next