Advertisement
ಆಸ್ಪತ್ರೆಗೆ ತೆರಳುವ ಮುಖ್ಯ ದ್ವಾರದಲ್ಲಿ ರಸ್ತೆ ಅತ್ಯಂತ ಕೆಟ್ಟು ಹೋಗಿದ್ದು, ವಾಹನಗಳಿಗೆ ಸುಗಮವಾಗಿ ಸಾಗಲು ಸಾಧ್ಯವಾಗದೆ ಚಾಲಕರು ಸಮಸ್ಯೆಗೆ ಸಿಲುಕುತ್ತಿದ್ದರು. ಆಸ್ಪತ್ರೆಗೆ ಬರುವ ರೋಗಿಗಳಿಗೂ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯಲ್ಲಿ ಹೊಂಡಗುಂಡಿ ನಿರ್ಮಾಣವಾಗಿದ್ದು, ಈ ರಸ್ತೆಯನ್ನು ನವೀಕರಿಸಲು ಅನುಮತಿ ಲಭಿಸುವುದರೊಂದಿಗೆ ರಸ್ತೆಗೆ ಶಾಪ ಮೋಕ್ಷ ಲಭಿಸಿದಂತಾಗಿದೆ.
Related Articles
ನಗರದ ಎಂ.ಜಿ. ರಸ್ತೆಯಿಂದ ಆಸ್ಪತ್ರೆಗೆ ತಲುಪಲಿರುವ 50 ಮೀಟರ್‌ನಷ್ಟು ರಸ್ತೆ ಸಂಪೂರ್ಣ ಶೋಚನೀಯವಾಗಿದೆ. ರಸ್ತೆಯಿಂದ ವಾಹನಗಳು ಹಾದು ಹೋಗುವಾಗ ಜಲ್ಲಿ ಸಿಡಿಯುಔಊದು ಸಾಮಾನ್ಯವಾಗಿದೆ. ಜಲ್ಲಿ ಸಿಡಿದು ರಸ್ತೆ ಪಕ್ಕದಲ್ಲಿ ಸಾಗುವವರ ಮೈಮೇಲೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ. ರಸ್ತೆಯ ಶೋಚನೀಯ ಸ್ಥಿತಿಯಿಂದಾಗಿ ಅಪಾಯಕ್ಕೆ ಕಾರಣ ವಾಗುತ್ತಿದೆ. ಕೆಲವು ತಿಂಗಳುಗಳಿಂದ ರಸ್ತೆ ಹಾನಿಯಾಗು ತ್ತಲೇ ಬಂದಿದ್ದರೂ ಈ ವರೆಗೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿರಲಿಲ್ಲ. ಸುಮಾರು 50 ಮೀಟರ್‌ಗಿಂತಲೂ ಕಡಿಮೆ ಇರುವ ರಸ್ತೆಯನ್ನು ನವೀಕರಿಸುವ ಬಗ್ಗೆ ಇತ್ತ ಗಮನ ಹರಿಸದಿರುವ ಬಗ್ಗೆ ವ್ಯಾಪಕ ಪ್ರತಿಭಟನೆಗೂ ಕಾರಣವಾಗಿತ್ತು.
Advertisement
ಹೊಂಡಗುಂಡಿ ರಸ್ತೆ ರಸ್ತೆಗೆ ಹಾಸಲಾಗಿದ್ದ ಕಗ್ಗಲ್ಲು ಮೇಲೆ ಬಿದ್ದು ಹೊಂಡ ಗುಂಡಿಯಾಗಿದೆ. ರಸ್ತೆ ಶೋಚನೀಯವಾಗಿರುವುದರಿಂದ ತುರ್ತು ವಿಭಾಗಕ್ಕೆ ಕೊಂಡೊಯ್ಯುವ ರೋಗಿಗಳ ದುಃಸ್ಥಿತಿ ದಯನೀಯವಾಗಿದೆ. ರಸ್ತೆ ಸಂಪೂರ್ಣ ಕೆಟ್ಟು ಹೋದುದರಿಂದಾಗಿ ಗರ್ಭಿಣಿಯರೂ ಹೆಚ್ಚು ಸಂಕಷ್ಟ ಅನುಭವಿಸುವಂತಾಗಿದೆ. ರೋಗಿಗಳ ಜತೆಯಲ್ಲಿ ಬರುವವರು ರಸ್ತೆಯ ಸ್ಥಿತಿಯನ್ನು ಕಂಡು ಶಾಪ ಹಾಕಿದ್ದು ಇದೆ. ಮುಂದಿನ ಕೆಲವು ದಿನಗಳಲ್ಲಿ ಮಳೆ ಆರಂಭವಾಗುವ ಮುನ್ನವೇ ರಸ್ತೆ ದುರಸ್ತಿ ಸಾಧ್ಯವಾಗದಿದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ನವೀಕರಿಸಲು ಅನುಮತಿ ಲಭಿಸಿರುವುದರಿಂದ ಶೀಘ್ರವೇ ರಸ್ತೆ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ. ಶಾಸಕ ನಿಧಿ ಬಳಕೆ
ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಈ ರಸ್ತೆಯನ್ನು ನವೀಕರಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಶಾಸಕ ನಿಧಿಯನ್ನು ಬಳಸಿಕೊಳ್ಳಲಾಗುವುದು. ಶೀಘ್ರವೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ರಸ್ತೆಯನ್ನು ಕಾಂಕ್ರೀಟ್‌ಗೊಳಿಸುವ ಹಿನ್ನೆಲೆಯಲ್ಲಿ ಶಾಸಕ ನಿಧಿಯಿಂದ 10 ಲಕ್ಷ ರೂ. ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.
– ಎನ್.ಎ. ನೆಲ್ಲಿಕುನ್ನು, ಶಾಸಕರು, ಕಾಸರಗೋಡು.