Advertisement

ಮೆಟ್ರೋ ರೈಲು ಯೋಜನೆಯಲ್ಲಿ ಅವ್ಯವಹಾರ: ಡಿಎಂಕೆ ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ದೂರು

10:02 PM Apr 30, 2023 | Team Udayavani |

ಚೆನ್ನೈ: ಚೆನ್ನೈನ ಮೆಟ್ರೋ ರೈಲು ಯೋಜನೆಯಲ್ಲಿ ಅವ್ಯವಹಾರ ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಿಬಿಐಗೆ ದೂರು ನೀಡಿದ್ದಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಭಾನುವಾರ ಹೇಳಿದ್ದಾರೆ.

Advertisement

2006ರಿಂದ 2011ರ ಅವಧಿಯಲ್ಲಿ ಡಿಎಂಕೆ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿದ್ದ ಚೆನ್ನೈ ಮೆಟ್ರೋ ರೈಲು ಯೋಜನೆ ಮೊದಲನೇ ಹಂತದಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ದೂರಿದ್ದಾರೆ. ಇದೇ ಆರೋಪವನ್ನು ಮುಂದಿಟ್ಟುಕೊಂಡು ಇನ್ನೂ ಆರು ಮಂದಿ ಕೇಸು ದಾಖಲಿಸಿದ್ದಾರೆ ಎಂದರು.

2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿ “ನನ್ನ ನೆಲ; ನನ್ನ ಮಣ್ಣು’ ಯಾತ್ರೆ ಕೈಗೆತ್ತಿಕೊಳ್ಳಲಾಗುತ್ತದೆ. ಅದರಲ್ಲಿ ಡಿಎಂಕೆ ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಕೈಗೆತ್ತಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಕೆಲ ದಿನಗಳ ಹಿಂದೆ ಅಣ್ಣಾಮಲೈ ಅವರು ತಮಿಳುನಾಡಿನ ಹಾಲಿ ಆಡಳಿತ ಪಕ್ಷದ ವಿರುದ್ಧ “ಡಿಎಂಕೆ ಫೈಲ್ಸ್‌’ ಎಂಬ ಸರಣಿ ಬಿಡುಗಡೆ ಮಾಡಿದ್ದರು. ಅದರ ವಿರುದ್ಧ ಅಣ್ಣಾಮಲೈ ವಿರುದ್ಧ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next